*ರಾಜ್ಯದಲ್ಲಿ 20 ಕೆಎಎಸ್ ಅಧಿಕಾರಿಗಳ ವರ್ಗಾವಣೆ*; *ಬೆಳಗಾವಿಯ ಮೂವರಿಗೆ ಹೊಸ ಜವಾಬ್ದಾರಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ, ಬೆಳಗಾವಿಯ ಮೂವರು ಸೇರಿದಂತೆ ಒಟ್ಟು 20 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ವರ್ಗಾವಣೆಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ಅಧಿಸೂಚನೆಯಂತೆ ವರ್ಗಾವಣೆಗೊಂಡ ಅಧಿಕಾರಿಗಳಿಗೆ ವಿವಿಧ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಹೊಸ ಜವಾಬ್ದಾರಿ ವಹಿಸಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
ಕಮಲಾಬಾಯಿ ಬಿ: ಜಂಟಿ ನಿರ್ದೇಶಕರು, ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು.
ಮಾರುತಿ ಬ್ಯಾಕೋಡ್: ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ.
ಪಾರ್ವತಿ: ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ದೇವದುರ್ಗ, ರಾಯಚೂರು.
ಜಿ.ಹೆಚ್ ಸತ್ಯನಾರಾಯಣ: ಉಪವಿಭಾಗಾಧಿಕಾರಿ, ಸಾಗರ ಉಪವಿಭಾಗ, ಶಿವಮೊಗ್ಗ ಜಿಲ್ಲೆ
ಜಂಬಗಿ ರೇಣುಕಾಪ್ರಸಾದ್ ದಿಲೀಪ್: ರಾಜ್ಯ ಪ್ರತಿನಿಧಿ-1, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು.
ನಯೀಂ ಉನ್ನೀಸಾ ಆರ್: ಪ್ರಸ್ತುತ ಹುದ್ದೆಯ ಜೊತೆಗೆ ರಾಜ್ಯ ಚುನಾವಣಾ ಆಯೋಗದ ಹುದ್ದೆಯ ಹೆಚ್ಚುವರಿ ಪ್ರಭಾರ.
ನಹಿದಾ ಜಮ್ ಜಮ್: ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.
ಮಂಜುನಾಥ್ ಕೆ: ಉಪ ವಿಭಾಗಾಧಿಕಾರಿ, ತುಮಕೂರು ಉಪ ವಿಭಾಗ, ತುಮಕೂರು.
ಪ್ರಕಾಶ್ ಎಂ ನಾಶಿ: ವಲಯ ಆಯುಕ್ತರು-5, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಹುಬಳ್ಳಿ,
ಸಂತೋಷ್ ರಾಣಿ: ಮುಖ್ಯ ಆಡಳಿತಾಧಿಕಾರಿ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಾಯಚೂರು.
ಸಿದ್ದರಾಯ ಜಟ್ಟೆಪ್ಪ ಭೋಸಗಿ: ಪುನರ್ ವಸತಿ ಅಧಿಕಾರಿ, ಯುಕೆಪಿ, ಬೀಳಗಿ,
ಯಲ್ಲಪ್ಪ ಗೋಣೆಣ್ಣನವರ: ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ), ಜಿಲ್ಲಾ ಪಂಚಾಯತ್, ಬೆಳಗಾವಿ.
ನರಸಿಂಹಮೂರ್ತಿ ಟಿ.ಎನ್: ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಬೆಂಗಳೂರು ದಕ್ಷಿಣ ಜಿಲ್ಲೆ
ಅಣ್ಣಾರಾವ್ ಪಾಟೀಲ್: ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (GESCOM), ಕಲಬುರಗಿ.
ಸುರೇಶ್: ವಿಶೇಷ ಭೂಸ್ವಾಧೀನಾಧಿಕಾರಿ, ಸಣ್ಣ ಮತ್ತು ಮಧ್ಯಮ ನೀರಾವರಿ ಯೋಜನೆ, ಕಲಬುರಗಿ.
ಅಂಜುಂ ತಬಸ್ಸುಮ್ ಲಪ್ಪರಿ: ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಲಬುರಗಿ.
ಮೋಹನ್ ಭಸ್ಮ: ವಿಶೇಷ ಭೂಸ್ವಾಧೀನಾಧಿಕಾರಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ.
ಮಂಜುನಾಥ್ ಮುನ್ನೋಳ್ಳಿ: ವಲಯ ಆಯುಕ್ತರು (ದಕ್ಷಿಣ), ಮಹಾನಗರ ಪಾಲಿಕೆ, ಬೆಳಗಾವಿ.
ನಾಗಮ್ಮ ಮುಖ್ಯ ಆಡಳಿತಾಧಿಕಾರಿ, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಯಾದಗಿರಿ.
ಡಾ. ನಯನ ಎಂ: ಉಪವಿಭಾಗಾಧಿಕಾರಿಗಳು, ಕೋಲಾರ ಉಪ ವಿಭಾಗ, ಕೋಲಾರ ಜಿಲ್ಲೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಕೇಶವಪ್ರಸಾದ್ ಕೆ.ಎಚ್. ಅವರು ವರ್ಗಾವಣೆ ಆದೇಶಕ್ಕೆ ಸಹಿ ಮಾಡಿದ್ದಾರೆ.
ಸ್ಥಳ ನಿಯುಕ್ತಿಗಾಗಿ ಕಾಯುತ್ತಿರುವ ಅಧಿಕಾರಿಗಳು ಮುಂದಿನ ನಿಯುಕ್ತಿಗಾಗಿ ಸಂಬಂಧಪಟ್ಟ ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


