ಶ್ರಿ ಗುರುಗೋವಿಂದ ವಿಠ್ಠಲ ಭಜನಾ ಮಂಡಳಿಯ 20ನೇ ವಾರ್ಷಿಕೋತ್ಸವ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಟಿಳಕವಾಡಿ ಶ್ರೀಕೃಷ್ಣ ಮಠದಲ್ಲಿ ಶ್ರಿ ಗುರುಗೋವಿಂದ ವಿಠ್ಠಲ ಭಜನಾ ಮಂಡಳಿಯ 20ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಅಧ್ಯಕ್ಷತೆ ಯನ್ನು ಸುಧಾಬಾಯಿ ಕುಲ್ಕರ್ಣಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೀನಾಕ್ಷಿ ದೇಶಪಾಂಡೆ ಹಾಗೂ ಗಾಯಕರಾದ ಸೌಮ್ಯಾ (ಬೆಂಗಳೂರು) ಆಗಮಿಸಿದ್ದರು. ಮೀನಾಕ್ಷಿ ದೇಶಪಾಂಡೆ “ಭಗವಂತ ತನ್ನವನನ್ನಾಗಿ ಸ್ವೀಕರಿಸಲು ಭಕ್ತರ ಜೀವನ ಕ್ರಮ ಹೇಗಿರಬೇಕು” ಎಂಬುವುದರ ಬಗ್ಗೆ ವಿವರಣೆ ನೀಡಿದರು.
ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಸೇವೆ ಸಲ್ಲಿಸುತ್ತಿರುವ ಸೌಮ್ಯಾ ಅವರು ಕೀರ್ತನೆಗಳಿಂದ ಜನರನ್ನು ಮೋಡಿ ಮಾಡಿದರು.
ಹಿಂದಿನ ಅಧ್ಯಕ್ಷರಾದ ವನಜಾ ಆಶ್ರಿತ್, ಅಧ್ಯಕ್ಷರಾದ ಪ್ರಜ್ಞಾ ಕಡಗದಕೈ, ಉಪಾಧ್ಯಕ್ಷರಾದ ವಿದ್ಯಾ ಜಕಾತಿ, ಕಾರ್ಯದರ್ಶಿ ವಿದ್ಯಾ ಮಾಹುಲಿ, ಖಜಾಂಚಿ ಸಂಧ್ಯಾ ಬಬಲೇಶ್ವರ ಕಾರ್ಯಕ್ರಮದ ರೂವಾರಿಗಳಗಿದ್ದರು.
ಸ್ವಾಗತ ಭಾಷಣವನ್ನು ವರದಾ ಭಟ್, ನಿರೂಪಣೆಯನ್ನು ಅರ್ಚನಾ ತೇಲಂಗ್ ಹಾಗೂ ವಂದನಾರ್ಪಣೆ ಮಾಲತಿ ಸರಳಾಯ ನಡೆಸಿಕೊಟ್ಟರು. ಸ್ವಾಗತಗೀತೆ ಯನ್ನು ದೇವರ ನಾಮದೊಂದಿಗೆ ಅಶ್ವಿನೀ ಉಪಾಧ್ಯಾಯ, ಸುಜಾತಾ ಕುಲ್ಕರ್ಣಿ ಸಂಗಡಿಗರು ನಡೆಸಿದರು.
ಶ್ರಿ ಗುರುಗೋವಿಂದ ವಿಠ್ಠಲಭಜನಾ ಮಂಡಳಿಯ ಇತರೇ ಸದಸ್ಯರುಗಳು ಹಾಗೂ ಸಮಸ್ತ ಭಜನಾ ಮಂಡಳಿಯ 200 ಕ್ಕಿಂತಲೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ