Latest

ಪಿಎಸ್ ಐ ಅಕ್ರಮ; ಶಾಸಕರ ಆಡಿಯೋ ವೈರಲ್; ಧ್ವನಿ ನನ್ನದೇ ಆದರೆ…ಬಸವರಾಜ್ ದಡೇಸಗೂರು ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಪಿಎಸ್ ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಹೊಸ ಹೊಸ ಅಕ್ರಮಗಳು ಹೊರ ಬರುತ್ತಿದ್ದು, ಸ್ವತ: ಜನಪ್ರತಿನಿಧಿಗಳೇ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಪುಷ್ಠಿ ನೀಡುವಂತ ಆಡಿಯೋ ವೈರಲ್ ಆಗಿದೆ.

ಕೊಪ್ಪಳದ ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಪಿಎಸ್ ಐ ನೇಮಕಾತಿಗಾಗಿ ಅಭ್ಯರ್ಥಿಯಿಂದ 15 ಲಕ್ಷ ಹಣ ಪಡೆದಿರುವ ಕುರಿತು ಆಡಿಯೋ ವೈರಲ್ ಆಗಿದೆ. ನೌಕರಿ ಕೊಡಿಸುವುದಾಗಿ ಹೇಳಿ ಶಾಸಕರು ಬಳ್ಳಾರಿ ಮೂಲದ ಪರಸಪ್ಪ ಎಂಬ ವ್ಯಕ್ತಿಯ ಮಗನಿಂದ 15 ಲಕ್ಷ ಹಣ ಪಡೆದಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.

Home add -Advt

ಸ್ವತ: ಶಾಸಕರು ಪರಸಪ್ಪ ಎಂಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಸಂಭಾಷಣೆ ಆಡಿಯೋ ವೈರಲ್ ಆಗಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಸವರಾಜ್ ದಡೆಸಗೂರು, ವೈರಲ್ ಆಗಿರುವ ಆಡಿಯೋ ನನ್ನದೇ ಆದರೆ ನಾನು ಹಣ ಪಡೆದಿಲ್ಲ. ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸಲು ನನ್ನೊಂದಿಗೆ ಮಾತನಾಡಿದ್ದರು. ನಾನು ಹಿರಿಯನಾಗಿ ಮಾತನಾಡಿದ್ದೇನೆ ಇದರಲ್ಲಿ ನಾನು ಹಣ ಪಡೆದಿಲ್ಲ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾರೋ ರೆಕಾರ್ಡ್ ಮಾಡಿ ಆಡಿಯೋ ವೈರಲ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮುರುಘಾಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; 2ನೇ ಆರೋಪಿ ಕಸ್ಟಡಿಗೆ ನೀಡುವಂತೆ ಪೊಲೀಸರ ಮನವಿ

https://pragati.taskdun.com/latest/murughashreebail-hearingjudicial-custody-2/

Related Articles

Back to top button