Belagavi NewsBelgaum NewsElection NewsKannada NewsKarnataka NewsPolitics

15 ಪಕ್ಷೇತರರು ಸೇರಿ 21 ಜನ ಬೆಳಗಾವಿ ಕಣದಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯಲಿರುವ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪೈಕಿ 21 ಜನರ ನಾಮಪತ್ರಗಳು ಸ್ವೀಕೃತವಾಗಿವೆ. 6 ಜನರು ವಿವಿಧ ಪಕ್ಷಗಳಿಂದ ಕಣದಲ್ಲಿದ್ದರೆ, 15 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.

ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಸೋಮವಾರ ನಾಮಪತ್ರ ವಾಪಸ್ ಪಡೆಯಲುಅಂತಿಮ ದಿನವಾಗಿದ್ದು, ಅಂದು ಅಂತಿಮ ಕಣ ಚಿತ್ರಣ ಗೊತ್ತಾಗಲಿದೆ.

ಬಹುಜನ ಸಮಾಜ ಸಮಾಜ ಪಕ್ಷದಿಂದ ಅಶೋಕ ಅಪ್ಪಯ್ಯ ಅಪ್ಪುಗೋಳ, ಬಿಜೆಪಿಯಿಂದ ಜಗದೀಶ ಶೆಟ್ಟರ್, ಕಾಂಗ್ರೆಸ್ ನಿಂದ ಮೃಣಾಲ ಹೆಬ್ಬಾಳಕರ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಬಸಪ್ಪ ಕುಂಬಾರ, ಪ್ರಜಾಕೀಯ ಪಕ್ಷದಿಂದ ಮಲ್ಲಪ್ಪ ಚೌಗಲಾ, ಎಸ್ ಯುಸಿಐಯಿಂದ ಲಕ್ಷ್ಮಣ ಜಡಗಣ್ಣವರ್ ಕಣದಲ್ಲಿದ್ದಾರೆ. ಇನ್ನೂ 15 ಜನರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button