Latest

21 ಸಾವಿರ ಸರಕಾರಿ ನೌಕರರಿಂದ ಬಿಪಿಎಲ್ ಕಾರ್ಡ್ ಕಳ್ಳಾಟ!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸರಕಾರಿ ನೌಕರರ ನೆರವಿನಿಂದ ಸರಕಾರಿ ಸೌಲಭ್ಯಗಳ ದುರ್ಬಳಕೆಯ ಕಳ್ಳಾಟಗಳು ಸಾಮಾನ್ಯ. ಆದರೆ ಸರಕಾರದ ಸೌಲಭ್ಯವೊಂದನ್ನು ಸಾವಿರಾರು ಸಂಖ್ಯೆಯ ಸರಕಾರಿ ನೌಕರರೇ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಪ್ರಜ್ಞಾವಂತರನ್ನು ಬೆಚ್ಚಿ ಬೀಳಿಸಿದೆ.

ರಾಜ್ಯದಲ್ಲಿ ನಕಲಿ ಬಿಪಿಎಲ್ ಕಾರ್ಡ್ ಹೊಂದಿದ 4.6 ಲಕ್ಷ ಜನರಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ 13.5 ಕೋಟಿ ರೂ. ದಂಡ ಸಂಗ್ರಹಿಸಿದೆ. ಈ ಪೈಕಿ  21,232 ಸಾವಿರ ಜನ ಸರಕಾರಿ ನೌಕರರು ಎಂಬ ವಿಷಯವನ್ನು ಇಲಾಖೆ ದೃಢಪಡಿಸಿದೆ. ಇವರಿಂದ 11.2 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು 2021ರ ಫೆಬ್ರವರಿ ತಿಂಗಳಿಂದಲೇ ಆರಂಭಿಸಲಾಗಿತ್ತು. ಈ ಕಾರ್ಯಾಚರಣೆ ಮುಂದುವರಿದಿದ್ದು, ಆಧಾರ್ ಸಂಖ್ಯೆಗಳ ಸಹಾಯದಿಂದ ಇನ್ನಿತರ ಇಲಾಖೆಗಳಿಂದ ಅಕ್ರಮದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

https://pragati.taskdun.com/increase-in-gold-and-silver-prices/

https://pragati.taskdun.com/bsc-hons-awareness-program-at-kls-git/

https://pragati.taskdun.com/heavy-rain-is-likely-in-different-parts-of-the-state-today-continued-yellow-alert/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button