Latest

ಗಾರ್ಬಾ ನೃತ್ಯ ಮಾಡುವಾಗ ವೇದಿಕೆಯಲ್ಲಿ ಕುಸಿದು ಬಿದ್ದು ಯುವಕ ಸಾವು

ಪ್ರಗತಿವಾಹಿನಿ ಸುದ್ದಿ, ಗಾಂಧಿನಗರ: 21 ವರ್ಷದ ಯುವಕನೊಬ್ಬ ಗಾರ್ಬಾ ನೃತ್ಯದಲ್ಲಿ ತೊಡಗಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಗುಜರಾತ್‌ನ ಆನಂದ್‌ನಲ್ಲಿ  ಈ ದುರ್ಘಟನೆ ನಡೆದಿದೆ. ವೀರೇಂದ್ರ ಸಿಂಗ್ ರಮೇಶ ಭಾಯ್ ರಜಪೂತ್ ಮೃತಪಟ್ಟ ಯುವಕ. ವೇದಿಕೆಯಲ್ಲಿ ಗಾರ್ಭಾ ನೃತ್ಯದಲ್ಲಿ ತೊಡಗಿದ್ದಾಗ ಏಕಾಏಕಿ ಕುಸಿದು ಬಿದ್ದ ಈತನನ್ನು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

Home add -Advt

ಆದರೆ ಅಲ್ಲಿ ವೈದ್ಯರು ಆತ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಘೋಷಿಸಿದರು. ಆತ ನರ್ತಿಸುತ್ತಲೇ ಕುಸಿದು ಬಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಜಾಲತಾಣದಲ್ಲಿ ವಿಡಿಯೊ ವೈರಲ್ ಆಗಿದೆ.

ಕಳೆದ ತಿಂಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ 20 ವರ್ಷದ ಕಲಾವಿದ ವೇದಿಕೆಯಲ್ಲಿ ನೃತ್ಯ ಮಾಡುವಾಗ ಮೃತಪಟ್ಟ ಘಟನೆಯ ಬೆನ್ನಿಗೇ ಈ ದುರ್ಘಟನೆ ನಡೆದಿದೆ. ನವರಾತ್ರಿ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಯುವಕನ ಸಾವು ಶೋಕ ತಂದೊಡ್ಡಿದೆ.

ಅಪ್ರಾಪ್ತ ಬಾಲಕನಿಂದ ಬೆತ್ತಲೆ ಪೂಜೆ ಮಾಡಿಸಿ ವಿಡಿಯೋ ಹರಿಬಿಟ್ಟ ದುರುಳರು

Related Articles

Back to top button