ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ನೇತಾಜಿ ಸುಭಾಷಚಂದ್ರ ಭೋಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ರಾಮತೀರ್ಥನಗರದ ಕಣಬರ್ಗಿ ರಸ್ತೆಯಲ್ಲಿರುವ ಸೊಸೈಟಿ ಪ್ರಧಾನ ಕಚೇರಿಯಲ್ಲಿ ನೇತಾಜಿ ಸುಭಾಷಚಂದ್ರ ಭೋಸರ 127ನೇ ಜಯಂತಿ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜ.23ರಂದು ಸಂಜೆ 4.30ಕ್ಕೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಪಾಲ್ಗೊಳ್ಳುವರು.
ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಿಶೋರ ಕಾಕಡೆ ಹಾಗೂ ಆನಂದ ಮುರ್ಕಿಬಾವಿ ತಂಡದವರು ರಾಷ್ಟ್ರಭಕ್ತಿಗೀತೆ ಪ್ರಸ್ತುತಪಡಿಸುವರು.
ಬೆಳಗಾವಿಯ ಯೋಧರಾದ ಮಲ್ಲಪ್ಪ ಮುನವಳ್ಳಿ (ಕಾರ್ಗಿಲ್ ಕಾರ್ಯಾಚರಣೆ), ವಿಷ್ಣು ಮೋರಟಾರ, ಮಕ್ಬೂಲ್ ಸಾದಿಕ್ (ಆಪರೇಷನ್ ರಕ್ಷಕ), ಮಾರುತಿ ಬೆಳಗಾಂವಕರ (1971 ಬಾಂಗ್ಲಾ ಯುದ್ಧ), ಪ್ರಕಾಶ ಪಾಟೀಲ (ಆಪರೇಷನ್ ರಕ್ಷಕ) ಹಾಗೂ ಸಂಕೇಶ್ವರದ ಈರಪ್ಪಝಿರಲಿ (1971 ಬಾಂಗ್ಲಾ ಯುದ್ಧ) ಅವರನ್ನು ಸನ್ಮಾನಿಸಲಾಗುವುದು.
ವಾರಕರಿ ಸಂಪ್ರದಾಯದ ಸಂತರಾದ ಯಲ್ಲಪ್ಪಾ ಗಿರಿಮಳ (ಸಾಂಬ್ರಾ), ಗಜಾನನ ಪಾಟೀಲ (ನಿಲಜಿ), ನಾಗೇಂದ್ರ ಶುಭಾಂಜಿ (ಅಷ್ಟೆ), ಪರಷುರಾಮ ಕುರಂಗಿ (ಮಾಸ್ತಮರ್ಡಿ), ದೋಂಡಿಬಾ ಮುತಗೇಕರ (ಕಣಬರ್ಗಿ) ಅವರನ್ನು ಗೌರವಿಸಲಾಗುವುದು.
ಕೃಷಿ ಕ್ಷೇತ್ರದ ಸಾಧಕರಾದ ಡಾ. ಸಮೀರ್ ನಾಯಕ, ಮಹಾಂತೇಶ ಸಿ. ಹಿರೇಮಠ, ಕಲ್ಲಪ್ಪ ತರಳೆ, ಅಜ್ಜಪ್ಪ ಕುಲಗೋಡ, ಪ್ರಭಾಕರ ಹಿರೇಮಠ, ರವಿ ಕುರಬೇಟ, ಅಮಿತ್ ವಿಶ್ವನಾಥ ಕುಲಕರ್ಣಿ, ರತ್ನಾ ರವಿಕುಮಾರ ಗೌಡರ್, ಪ್ರೇಮಾ ಶಂಕರ ಗಾಣಿಗೇರ ಅವರನ್ನು ಸನ್ಮಾನಿಸಲಾಗುವುದು.
ಜತೆಗೆ ಈ ವಿವಿಧ ಕ್ಷೇತ್ರಗಳ ಮಹನೀಯರಿಗೆ ನೇತಾಜಿ ಸುಭಾಷಚಂದ್ರ ಭೋಸ್ ಸೇವಾ ಪ್ರಶಸ್ತಿ- 2023 ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಾರುತಿ ಬಿ. ಝಿರಲಿ ತಿಳಿಸಿದ್ದಾರೆ.
*ಭೀಕರ ಅಪಘಾತ; ವಿದ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣ*
https://pragati.taskdun.com/biketipperaccidentstudent-death/
‘ಎಮರ್ಜೆನ್ಸಿ’ಗಾಗಿ ಎಲ್ಲ ಆಸ್ತಿ ಅಡ ಇಟ್ಟಿದ್ದಾರಂತೆ ಕಂಗನಾ
https://pragati.taskdun.com/kangana-has-mortgaged-her-property-for-emergency/
*ಯಡಿಯೂರಪ್ಪರನ್ನು ಸೈಡ್ ಲೈನ್ ಮಾಡಿದ್ರಾ BJP ನಾಯಕರು? ; ಮಾಜಿ ಸಿಎಂ BSY ಹೆಳಿದ್ದೇನು?*
https://pragati.taskdun.com/b-s-yedyurappabjpsidelinekalaburgireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ