Kannada NewsKarnataka News

‘ವಿಟಿಯು ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟ’

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ “ರಜತ ಮಹೋತ್ಸವ” ಅಂಗವಾಗಿ ೨೦೨೩ ಮೇ ೨೧ನೇ  ರಿಂದ ೨೪ನೇ  ರವರಿಗೆ  ರಂದು ‘೨೪ ನೇ ವಿಟಿಯು ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟ’ ವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

 ಇದರ ಉದ್ಘಾಟನಾ ಸಮಾರಂಭ ರವಿವಾರ, ದಿನಾಂಕ ೨೧.೦೫.೨೦೨೩ ರಂದು ಬೆಳಗ್ಗೆ ೯ ಗಂಟೆಗೆ ವಿ.ತಾ.ವಿ.ಯ ಮೈದಾನದಲ್ಲಿ ಜರುಗುವುದು. ಉದ್ಘಾಟನಾ ಸಮಾರಂಭಕ್ಕೆ ಅಂತ ರಾಷ್ಟ್ರೀಯ ಕ್ರೀಡಾಪಟು ಒಲಿಂಪಿಕ್ ಕ್ರೀಡೆಯಲ್ಲಿ ಭಾಗವಹಿಸಿದ ಹಾಗೂ ಹೈಜಂಪ್ (ಎತ್ತರದ ಜಿಗಿತ) ರಾಷ್ಟ್ರ ಮಟ್ಟದ ದಾಖಲೆಯನ್ನು ಹೊಂದಿರುವ ಸಹನಾ ಕುಮಾರಿ ಹಾಗೂ ಇವರ ಪತಿಯಾದ  ಅಂತರಾಷ್ಟ್ರೀಯ ಕ್ರೀಡಾಪಟು ನಾಗರಾಜ ಬಿ.ಜಿ., ಮುಖ್ಯ ಅತಿಥಿಗಳಾಗಿ ಜಂಟಿಯಾಗಿ ಈ ಕ್ರೀಡಾ ಕೂಟವನ್ನು ಉದ್ಘಾಟಿಸಲಿದ್ದಾರೆ.  ವಿ.ತಾ.ವಿ. ಯ ಕುಲಪತಿಗಳಾದ ಪ್ರೊ. ವಿದ್ಯಾಶಂಕರ ಎಸ್. ಅಧ್ಯಕ್ಷತೆಯನ್ನು ವಹಿಸುವರು.

 ಈ ಒಂದು ಕ್ರೀಡಾ ಕೂಟದಲ್ಲಿ ೭೦೦ ಕ್ಕಿಂತ ಹೆಚ್ಚಿನ ವಿದ್ಯಾರ್ಥಿನಿಯರು ಸೇರಿ ಸುಮಾರು ೧೫೦೦ ಕ್ರೀಡಾಪಟುಗಳು ವಿ.ತಾ.ವಿಯ ಅಧಿನದಲ್ಲಿ ಬರುವ ಬೇರೆ ಬೇರೆ ಮಹಾವಿದ್ಯಾಲಯಗಳಿಂದ ೨೫ ಬೇರೆ ಬೇರೆ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. 

ಬೆಳಗಾವಿ ನಗರದ ವಿ.ತಾ.ವಿ.ಯ ತಾಂತ್ರಿಕ ಮಹಾವಿದ್ಯಾಲಯಗಳು, ಕೆಎಸ್‌ಆರ್‌ಪಿ, ಮಚ್ಛೆ, ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ ಮತ್ತು ಇನಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಇವರು ಕ್ರೀಡಾ ಕೂಟಕ್ಕೆ ಆಗಮಿಸುವ ಕ್ರೀಡಾಪಟುಗಳಿಗೆ ವಸತಿ ಹಾಗೂ ಸಾರಿಗೆ ವ್ಯವಸ್ಥೆಯ ಸೌಲಭ್ಯವನ್ನು ಕಲ್ಪಿಸಿಕೊಡಲಿದ್ದಾರೆ. 

ನಾಲ್ಕು ದಿನಗಳ ನಡೆಯುವ ಈ ಕ್ರೀಡಾ ಕೂಟದ ಸಮಾರೋಪ ಸಮಾರಂಭವನ್ನು ಬುಧವಾರ, ದಿನಾಂಕ ೨೪.೦೫.೨೦೨೩ ರಂದ ಮಧ್ಯಾಹ್ನ ೩.೦೦ ಗಂಟೆಗೆ ನಡೆಯಲ್ಲಿದ್ದು ಬೆಳಗಾವಿ ನಗರದ ಪೊಲೀಸ್ ಆಯುಕ್ತರಾದ ಡಾ.ಎಂ. ಬಿ. ಬೋರಲಿಂಗಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಕುಲಪತಿ ಪ್ರೊ ವಿದ್ಯಾಶಂಕರ ಎಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ ಬಿ ಈ ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ ಟಿ ಎನ್ ಶ್ರೀನಿವಾಸ, ಹಾಗೂ ವಿ ಟಿ ಯು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ಪಿ ಪುಟ್ಟಸ್ವಾಮಿ ಗೌಡ ಅವರು ಹಾಜರಿದ್ದರು.

ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿರುವ ವಿಷಯಗಳು

  • ವಿ ಟಿ ಯು ನ ಇತ್ತೀಚಿನ ಸಾಧನೆ ಹಾಗೂ ಅನುಷ್ಠಾನಕ್ಕೆ ತಂದ ಯೋಜನೆಗಳು
  • ಪ್ರಥಮ ವರ್ಷದ ಬಿ.ಇ./ಬಿ.ಟೆಕ್. ಪ್ರೋಗ್ರಾಮ್ ಗಳಿಗೆ ವಿದ್ಯಾರ್ಥಿಗಳ ಆಸಕ್ತಿ ಹಾಗೂ ಅವಶ್ಯಕ ಕೌಶಲ್ಯ ಆಧಾರಿತ ವಿಷಯಗಳ  ಆಯ್ಕೆ ಚಾಯ್ಸ್ ಬೇಸ್ಡ್  ಕ್ರೆಡಿಟ್ ವ್ಯವಸ್ಥೆಯನ್ನು ಈ ಶೈಕ್ಷಣಿಕ ವರ್ಷದಿಂದ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ.
  • ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಕೌಶಲ್ಯ/ಸಾಮರ್ಥ್ಯ ವರ್ಧಕ ಕೋರ್ಸ್, ಪ್ರೋಗ್ರಾಮಿಂಗ್ ವಿಷಯ, ಇಂಜಿನಿಯರ್‌ಗಳಿಗಾಗಿ ಜೀವಶಾಸ್ತ್ರ ವಿಷಯ,  ನಾವೀನ್ಯತೆ ಮತ್ತು ವಿನ್ಯಾಸ ಚಿಂತನೆ, ಸಾರ್ವತ್ರಿಕ ಮಾನವ ಮೌಲ್ಯಗಳು, ಆರೋಗ್ಯದ ವೈಜ್ಞಾನಿಕ ಅಡಿಪಾಯ, ಇತಿಹಾಸ, ಕಲೆ, ಸಮಾಜ ವಿಜ್ಞಾನ, ಅರ್ಥಶಾಸ್ತç ಮತ್ತು ಬ್ಯಾಂಕಿ0ಗ್,  ಸಾಹಿತ್ಯ, ಸಂಶೋಧನಾ ವಿಧಾನ, ಐಪಿಆರ್ ಮತ್ತು ಕಾನೂನು ವಿಷಯಗಳನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಮೊದಲನೇ ವರ್ಷದಿಂದಲೇ ಕೌಶಲ್ಯದ ಅವಶ್ಯಕತೆಗನುಸಾರವಾಗಿ ತಮ್ಮ ಆಸಕ್ತಿಯ ಅನುಗುಣದಂತೆ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.
  • ಅಂತರ/ಬಹು-ಶಿಸ್ತಿನ ವಿಷಯಗಳಲ್ಲಿ ಬಿ.ಇ./ಬಿ.ಟೆಕ್. ಮೈನ್‌ರ ಮತ್ತು ಹಾನರ್ಸ ಪದವಿಗಳು.
  • ಉದಾಹರಣೆ: ಮೆಕ್ಯಾನಿಕಲ್ ಇಂಜಿನಿಯರಿ0ಗ ವಿದ್ಯಾರ್ಥಿಯು ಕಂಪ್ಯೂಟರ್ ಸಂಬAಧಿತ/ಅಡ್ವಾನಸ್ ವಿಷಯಗಳಲ್ಲಿ ಮೈನರ್ ಪದವಿಯನ್ನು ಆಯ್ಕೆ ಮಾಡಬಹುದು.
  • ಮಲ್ಟಿ-ಡಿಸಿಪ್ಲಿನರಿ ಪ್ರೊಜೇಕ್ಟ್ ವರ್ಕ ಹಾಗೂ ಸಿದ್ಧಾಂತ ಮತ್ತು ಪ್ರಯೋಗಾಲಯದ ಏಕೀಕರಣ, ಎಲ್ಲೆಲ್ಲಿ ಅಗತ್ಯವಿರುವುದು.
  • ಆನ್‌ಲೈನ್ ಪ್ರೋಗ್ರಾಮ್‌ಗಳನ್ನು ಪ್ರಾರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
  • ಈ ಶೈಕ್ಷಣಿಕ ವರ್ಷದಿಂದ ಆನ್‌ಲೈನ್ ಪ್ರವೇಶ ಅನುಮೋದನೆಯ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದೆ.
  • ಸ0ಶೋಧನೆ ಮತ್ತು ನಾವೀನ್ಯತೆಗಳ ಮೇಲೆ ಸಾಮಾಜಿಕ ಸಂಪರ್ಕದ ಅಲ್ಪಾವಧಿಯ ಇಂಟರ್ನ್ಶಿಪ್.
  • ಉದ್ಯಮ/ಸ0ಶೋಧನಾ ದಲ್ಲಿ ಆರು ತಿಂಗಳ ಇಂಟರ್ನ್ಶಿಪ್.
  • ಸ0ಪೂರ್ಣ ಫಲಿತಾಂಶ ಆಧಾರಿತ ಶಿಕ್ಷಣವನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನದಲ್ಲಿ ಅಳವಡಿಸಲಾಗಿದೆ.
  • ಪರೀಕ್ಷೆ ಮುಗಿದ ೧೦ ದಿನಗಳೊಳಗೆ ಸೆಮಿಸ್ಟರ್ ಅಂತಿಮ ಪರೀಕ್ಷೆಗಳ ಫಲಿತಾಂಶಗಳನ್ನು ನಿಖರವಾದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತದೆ.
  • ಎಲ್ಲಾ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಫಲಿತಾಂಶಗಳನ್ನು ವಾಟ್ಸಪ್ಪ್ ಮೂಲಕ ಪಡೆಯುತ್ತಿದ್ದಾರೆ.
  • ೨೪ ಗಂಟೆಗಳ ಒಳಗೆ ಗ್ರೇಡ್ ಕಾರ್ಡಗಳು, ಟ್ರಾನ್ಸ್ಸಿಪ್ಟ್ಗಳನ್ನು ನೀಡುವುದು.
  • ಘಟಿಕೋತ್ಸವ ಪ್ರಮಾಣಪತ್ರಗಳ ಗುಣಮಟ್ಟವನ್ನು ೧೫ ಕ್ಕೂ ಹೆಚ್ಚು ವೈಶಿಷ್ಟ್ಯಗಳೊಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ
  • ಪಿ.ಹೆಚ್‌ಡಿ. ಏಕ ರೀತಿಯ ನಿಯಮವನ್ನು ಅಳವಡಿಸಲಾಗಿದೆ ಹಾಗೂ ಎಲ್ಲಾ ಹಂತಗಳಲ್ಲಿ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲಾಗಿದೆ.
  • ಪಿ.ಹೆಚ್‌ಡಿ. ಪ್ರಬಂಧದ ಅಂತರಾಷ್ಟಿಯ ಮಾನದಂಡಗಳನ್ನು ನಿರ್ವಹಿಸಲು ಕೃತಿಚೌರ್ಯ  ಶೇಕಡಾವಾರು ಪ್ರಮಾಣವನ್ನು ೨೫% ರಿಂದ ೧೦% ಕ್ಕೆ ಇಳಿಸಲಾಗಿದೆ.
  • ಪಿ.ಹೆಚ್.ಡಿ. ವೈವಾ-ವೋಸ್ (Viva Voce) ನಂತರ ಒಂದು ದಿನದಲ್ಲಿ ಪಿ.ಹೆಚ್.ಡಿ ತಾತ್ಕಾಲಿಕ ಪದವಿ ಪ್ರಮಾಣಪತ್ರವನ್ನು ನೀಡುವುದು.
  • ಆಟೊನೊಮಸ್ ಸಂಸ್ಥೆಗಳೆಗೆ ಹೋಲುವಂತೆ ೨೦೨೨ ನೇ ಸ್ಕೀಮ್‌ದಿಂದ ಮೇಕಪ್ ಪರೀಕ್ಷೆಯ ಪರಿಚಯ.
  • ಘಟಿಕೋತ್ಸವ ಪ್ರಮಾಣ ಪತ್ರಗಳಲ್ಲಿ QR ಕೋಡ್‌ಗಳ ಪರಿಚಯ.
  • ಪಿ.ಹೆಚ್.ಡಿ. ಕೋರ್ಸ್ ವರ್ಕ ಕ್ಕಾಗಿ NPTEL ಕೋರ್ಸಗಳ ಪ್ರಮಾಣೀಕರಣದ ಪರಿಗಣನೆ.
  • ಪಿ.ಹೆಚ್.ಡಿ. ಕೋರ್ಸ್ ವರ್ಕ ಕ್ಕಾಗಿ ವಿಶೇಷ ಮರುಮೌಲ್ಯಮಾಪನ ಯೋಜನೆ.
  • ಹೀಗೆ ಕಳೆದ ಏಳು ತಿಂಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ  ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಹಾಕಿಕೊಂಡು ವಿ ಟಿ ಯು ಅನುಷ್ಠಾನಗೊಳಿಸಿದೆ

ವಿ ಟಿ ಯು ಕ್ಯಾಂಪಸ್ ನಲ್ಲಿ ಬಿ ಟೆಕ್ ಕೋರ್ಸ್

ಇಂಜಿನಿಯರಿಂಗ್ ಮಾಡ ಬಯಸುವ ಬಡ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಶುಲ್ಕದಲ್ಲಿ ಕೌಶಲ್ಯ ಆಧಾರಿತ ಗುಣಮಟ್ಟದ ಇಂಜಿನಿಯರಿಂಗ್ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ವಿ ಟಿ ಯು ತನ್ನ  ಅಧ್ಯಯನ ಕೇಂದ್ರಗಳಲ್ಲಿ ಬಿ ಟೆಕ್ ಕೋರ್ಸ್ ನ್ನು ಆರಂಭಿಸಲಾಗಿದೆ.

Addition to PG programs VTU has started UG B.Tech. Programs at its various Campuses located at different parts of Karnataka 

VTU Belagavi Campus,                                            CET Code – E279

  1. B.Tech. in Robotics & Automation
  2. B.Tech. in Computer Science & Business systems
  3. B.Tech. in Electronics and Computer Engineering
  4. B.Tech. in Computer Science and  Engineering

VTU Muddenahalli Chikkaballapura Campus,       CET Code – E278

  1. B.Tech. in Aeronautical Engineering
  2. B.Tech. in Mecahnial & Smart Manufacturing 
  3. B.Tech. in Electronics and Computer Engineering

VTU Mysuru Campus,                                               CET Code – E290

  1. B.Tech. in Computer Science and Engineering
  2. B.Tech. in Mechanical Engineering  

VTU Kalburgi Campus,                                               CET Code – E289

  1. B.Tech. in Computer Science and Engineering
  2. B.Tech. in Electronic and Computer Engineering  
https://pragati.taskdun.com/clp-leader-siddaramaiahd-k-shivakumargovernor-meet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button