Latest

ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್;  25 ಮಂದಿ ಸಾವು

ಪ್ರಗತಿವಾಹಿನಿ ಸುದ್ದಿ, ಗರ್ವಾಲ್: 40 ಕ್ಕೂ ಹೆಚ್ಚು ಜನರಿದ್ದ ಮದುವೆಯ ದಿಬ್ಬಣದವರನ್ನು ಸಾಗಿಸುತ್ತಿದ್ದ ಬಸ್ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 25 ಜನರು ಮೃತಪಟ್ಟಿದ್ದಾರೆ.

ಮಂಗಳವಾರ ರಾತ್ರಿ ಉತ್ತರಾಖಂಡ್‌ನ ಪೌರಿ ಗರ್ವಾಲ್‌ನಲ್ಲಿ  ಈ ಘಟನೆ ನಡೆದಿದೆ.

Home add -Advt

ಪೊಲೀಸ್ ಮತ್ತು ಎಸ್‌ಡಿಆರ್‌ಎಫ್ ತಂಡ ರಾತ್ರೋರಾತ್ರಿ ಸ್ಥಳಕ್ಕೆ ತೆರಳಿ 21 ಜನರನ್ನು ರಕ್ಷಿಸಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

ಮದುವೆಯ ದಿಬ್ಬಣ ಲಾಲ್‌ಧಾಂಗ್‌ನಿಂದ ಬಸ್‌ನಲ್ಲಿ ಹೊರಟಿತ್ತು ಎಂದು ಹರಿದ್ವಾರ ನಗರ ಎಸ್‌ಪಿ  ಹೇಳಿದರು.

T20 ಕ್ರಿಕೆಟ್ ಇತಿಹಾಸದಲ್ಲಿ 9 ವಿಕೆಟ್‌ಗಳಿಗೆ ಅತ್ಯಧಿಕ ಜೊತೆಯಾಟ ದಾಖಲಿಸಿದ ಭಾರತ

Related Articles

Back to top button