Belagavi NewsBelgaum NewsLatestPolitics

*29ನೇ ಕರ್ನಾಟಕ ರಾಜ್ಯ ಸ್ಕೌಟ್ ಮತ್ತು ಗೈಡ್ ಜಾoಬೂರೇಟ್‌ ಲೋಗೋ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಲೋಕೋಪಯೋಗಿ ಸಚಿವರು,ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಬೆಳಗಾವಿ ರವರು ತಮ್ಮ ಗೃಹ ಕಚೇರಿಯಲ್ಲಿ 29ನೇ ಕರ್ನಾಟಕ ರಾಜ್ಯ ಸ್ಕೌಟ್ ಮತ್ತು ಗೈಡ್ ಜಾoಬೂರೇಟ್‌ನ ಲೋಗೋವನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಗಜಾನನ ಮನ್ನಿಕೇರಿ ವಿಠ್ಠಲ ಎಸ್ ಬಿ, ಎನ್ ಜಿ ಪಾಟೀಲ, ರಾಜಕುಮಾರ ಕುಂಬಾರ, ಸಿ.ಎಸ್.ಹಿರೇಮಠ, ಜಿಲ್ಲಾ ಕಾರ್ಯದರ್ಶಿಗಳು, ಜಿಲ್ಲಾ ಸಂಘಟಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಾoಬೂರೇಟ್‌ ಕಾರ್ಯಕ್ರಮದ ವಿಶೇಷತೆಗಳು, ಯುವಜನರಲ್ಲಿನ ನಾಯಕತ್ವ ಹಾಗೂ ತಂಡಾಭಿವೃದ್ಧಿಗೆ ನೀಡುವ ಪ್ರೇರಣೆ ಕುರಿತು ಸಭೆಯಲ್ಲಿ ಸಂಕ್ಷಿಪ್ತವಾಗಿ ಮಾಹಿತಿ ನೀಡಲಾಯಿತು.

ಜಿಲ್ಲಾ ಮಟ್ಟದಲ್ಲಿ ಜಾoಬೂರೇಟ್‌ಗೆ ಸಂಬಂಧಿಸಿದ ವಿವಿಧ ಸಿದ್ಧತೆಗಳು ಪ್ರಾರಂಭವಾಗಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಎಲ್ಲಾ ವಿಭಾಗಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು.

ಮಾನ್ಯ ಸಚಿವರು 29ನೇ ಕರ್ನಾಟಕ ರಾಜ್ಯ ಜಾoಬೂರೇಟ್‌ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಸಹಾಯ ಸಹಕಾರ ನೀಡುವುದಾಗಿ ಬರವಸೆ ನೀಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

Home add -Advt

Related Articles

Back to top button