ಪ್ರಗತಿವಾಹಿನಿ ಸುದ್ದಿ; ರಾಯಚೂರು: 8 ವರ್ಷದ ವಿದ್ಯಾರ್ಥಿ ಮೇಲೆ ಶಿಕ್ಷಕಿಯೊಬ್ಬಳು ಕುದಿರುವ ನೀರು ಸುರುದು ಕಿರಾತಕಿಯಂತೆ ವರ್ತಿಸಿರುವ ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕಲ್ಲೂರಿನಲ್ಲಿ ನಡೆದಿದೆ.
2 ತರಗತಿಯ ಬಾಲಕ ಲಿಖಿತ್ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕುದಿಯುತ್ತಿದ್ದ ನೀರು ಮೈಮೇಲೆ ಸುರಿದ ಪರಿಣಾಮ ಬಾಲಕನ ದೇಹದಲ್ಲಿ ಶೇ.40ರಷ್ಟು ಭಾಗ ಸುಟ್ಟು ಹೋಗಿದ್ದು, ಸಾವು-ಬದುಕಿನ ನಡುವೆ ಹೋರಾಡಿತ್ತಿದ್ದಾನೆ.
ವಿದ್ಯಾರ್ಥಿ ಸಮವಸ್ತ್ರದಲ್ಲಿ ಮಲವಿಸರ್ಜನೆ ಮಾಡಿದ್ದಕ್ಕೆ ಶಿಕ್ಷಕಿ ವಿದ್ಯಾರ್ಥಿ ಮೇಲೆ ಕುದಿಯುತ್ತಿದ್ದ ನೀರನ್ನೇ ತೆಗೆದು ಸುರಿದಿದ್ದಾಳೆ. ಆಗಸ್ಟ್ 2 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿಕ್ಷಕಿ ವಿರುದ್ಧ ದೂರು ದಾಖಲಿಸಲು ಮಸ್ಕಿ ಪೊಲೀಸರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡ ನಿರ್ಲಕ್ಷ ಮಾಡಿದ್ದು, ಸೌಜನ್ಯಕ್ಕೂ ಸುಟ್ಟಗಾಯಗಳಿಂದ ಬಳಲುತ್ತಿರುವ ಬಾಲಕನನ್ನು ಭೇಟಿಯಾಗಿಲ್ಲ. ಶಿಕ್ಷಕಿಯ ವಿರುದ್ಧ ಶಾಲಾ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PSI ನೇಮಕಾತಿ ಅಕ್ರಮ: ಮತ್ತೋರ್ವ ಅಭ್ಯರ್ಥಿ ಬಂಧನ
https://pragati.taskdun.com/latest/psi-illegal-caseone-more-accusedarrest/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ