Education

*ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬಿಗ್ ಶಾಕ್*

ಪ್ರಗತಿವಾಹಿನಿ ಸುದ್ದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಗ್ ಶಾಕ್ ನೀಡಿದೆ. ಪರೀಕ್ಷಾ ಸಮಯ ಕಡಿತಗೊಳಿಸಿ ಆದೇಶ ಹೊರಡಿಸಿದೆ.

2024-25ನೇ ಸಾಲಿನ ಪರೀಕ್ಷೆಯಿಂದಲೇ ಇದು ಅನ್ವಯವಾಗಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.

ಈ ಮೊದಲು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯ 3 ಗಂಟೆ 15 ನಿಮಿಷವಿತ್ತು. ಅದರೆ ಈಗ ಸಮಯ ಕಡಿತ ಮಾಡಲಾಗಿದೆ. ಪರೀಕ್ಷೆಗಾಗಿ ಇದ್ದ 3 ಗಂಟೆ 15 ನಿಮಿಷಗಳಲ್ಲಿ 3 ಗಂಟೆ ಉತ್ತರ ಬರೆಯಲು ಹಾಗೂ 15 ನಿಮಿಷ ಪ್ರಶ್ನೆಗಳನ್ನು ಓದಲು ನೀಡಲಾಗಿತ್ತು. ಆದರೆ ಈಗ ಹೊಸ ನಿಯಮದ ಪ್ರಕಾರ ಉತ್ತರ ಬರೆಯಲು 2 ಗಂಟೆ 45 ನಿಮಿಷ ಸಮಯ ನಿಗದಿ ಮಾಡಲಾಗಿದೆ. 15 ನಿಮಿಷ ಸಮಯ ಕಡಿತಗೊಳಿಸಲಾಗಿದೆ.

ಸಮಯ ಕಡಿತ ಮಾಡಿರುವುದಕ್ಕೆ ಬೋರ್ಡ್ ಕಾರಣವನ್ನು ನೀಡಿದೆ. ಮೊದಲು 3 ಗಂಟೆ 15 ನಿಮಿಷ ಇದ್ದ ಸಮಯದಲ್ಲಿ 100 ಅಂಕಗಳಿಗೆ ಪ್ರಶ್ನೆ ಪತ್ರಿಕೆ ಕೊಡಲಾಗುತ್ತಿತ್ತು. ಆದರೆ ಈಗ 70/80 ಅಂಕಗಳಿಗೆ ಲಿಖಿತ ಪರೀಕ್ಷೆ ಇದ್ದು ಉಳಿದ ಅಂಕಗಳು ಇಂಟರ್ನಲ್ ಅಸೆಸ್ಮೆಂಟ್ ಗೆ ನೀಡಲಾಗುತ್ತದೆ. ಹೀಗಾಗಿ 15 ನಿಮಿಷ ಕಡಿತ ಮಾಡಲಾಗಿದೆ ಎಂದು ತಿಳಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button