Latest

ಹುಟ್ಟುಹಬ್ಬದ ಸಂಭ್ರಮದ ವೇಳೆ ಬಿಸಿ ಸಾಂಬಾರ್ ಗೆ ಬಿದ್ದ ಮಗು; ದುರಂತ ಸಾವು

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಹುಟ್ಟುಹಬ್ಬದ ಸಂಭ್ರಮದ ವೇಳೆ ಆಟವಾಡುತ್ತಿದ್ದ 2 ವರ್ಷದ ಮಗು ಸಾಂಬಾರ್ ಪಾತ್ರೆಗೆ ಬಿದ್ದು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಎಂಬಲ್ಲಿ ನಡೆದಿದೆ.

ತೇಜಸ್ವಿನಿ ಮೃತ ಮಗು. ಶಿವ ಹಾಗೂ ಭಾನುಮತ್ ದಂಪತಿಯ ಪುತ್ರಿ. ಮಗುವಿನ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದ ತಂದೆ-ತಾಯಿ, ಭೋಜನ ವ್ಯವಸ್ಥೆ ಮಾಡಿದ್ದರು. ಅತಿಥಿ ಸತ್ಕಾರದಲ್ಲಿ ನಿರತರಾಗಿದ್ದ ಪೋಷಕರು ಮಗುವನ್ನು ಗಮನಿಸಿಲ್ಲ.

ಅಡುಗೆ ಮನೆಗೆ ಆಟವಾಡುತ್ತಾ ಬಂದ ಮಗು, ಅಲ್ಲಿಯೇ ಇದ್ದ ಕುರ್ಚಿಮೇಲೆ ಹತ್ತಿದೆ. ಆಕಸ್ಮಿಕವಾಗಿ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.
ಬೆಳಗಾವಿ ಶಾಲೆಯಲ್ಲಿ ಹಿಜಾಬ್ ಕಿರಿಕ್; ಡಿಸಿಪಿ ಭೇಟಿ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button