Latest

ಕೊರೋನಾಗೆ ಶಿರಸಿಯಲ್ಲಿ ಮೊದಲ ಬಲಿ

ಪ್ರಗತಿವಾಹಿನಿ ಸುದ್ದಿ, ಕಾರವಾರ –  ಕೊರೊನಾ ಸೋಂಕಿತ ಶಿರಸಿಯ ವ್ಯಕ್ತಿಯೊಬ್ಬರು ಕಾರವಾರದ  ಕೋವಿಡ್ ಆಸ್ಪತ್ರೆಯಲ್ಲಿ  ಸೋಮವಾರ ಮೃತಪಟ್ಟಿದ್ದಾರೆ.
   ಬಾಳಗಾರಿನ 42 ವರ್ಷದ  ಸೋಂಕಿತ  ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.‌ ಜು.‌4 ರಂದು ಬೆಳಗಿನಜಾವ  2.30 ರ ಸುಮಾರಿಗೆ  ಬೆಂಗಳೂರಿನಿಂದ ಶಿರಸಿಗೆ ಬಂದು ನೇರವಾಗಿ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದರು.‌
ಅವರ ಆರೋಗ್ಯದ ಸ್ಥಿತಿ ಗಂಭೀರವಾದ ಕಾರಣ  ಜು. 5ರಂದು  ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇಂದು  ಬೆಳಗ್ಗೆ  ಆರ್ ಟಿಪಿಸಿಆರ್ ಲ್ಯಾಬ್ ನ ಪರೀಕ್ಷೆಯಲ್ಲೂ ಸೋಂಕು ಖಚಿತಪಟ್ಟಿತ್ತು.
ಈ ಹಿನ್ನೆಲೆಯಲ್ಲಿ  ಕಾರವಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಮಧ್ಯಾಹ್ನ 3.30ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಶಿರಸಿ ಎಸಿ ಈಶ್ವರ ಉಳ್ಳಾಗಡ್ಡಿ ಅವರು ಖಚಿತಪಡಿಸಿದ್ದಾರೆ.

Related Articles

Back to top button