ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದ 3 ಪ್ರದೇಶಗಳು ಕಂಟೈನ್ಮೆಂಟ್ ಝೋನ್ ನಿಂದ ಮುಕ್ತವಾಗಿವೆ.
ಅಮನ್ ನಗರ, ಸಂಗಮೇಶ್ವರ ನಗರ ಮತ್ತು ಕ್ಯಾಂಪ್ ಪ್ರದೇಶಗಳನ್ನು ಕಂಟೈನ್ಮಂಟ್ ಝೋನ್ ನಿಂದ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಡಿ ನೋಟಿಫೈ ಮಾಡಿದ್ದಾರೆ.
ಈ ಪ್ರದೇಶಗಳಲ್ಲಿನ ಎಲ್ಲ ಕೊರೋನಾ ಸೋಂಕಿತರು ರೋಗದಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸಧ್ಯಕ್ಕೆ ಈ ಪ್ರದೇಶಗಳಲ್ಲಿ ಯಾರೂ ಸೋಂಕಿತರು ಇಲ್ಲ. ಈ ಹಿನ್ನೆಲೆಯಲ್ಲಿ ಈ ಎಲ್ಲ ಪ್ರದೇಶಗಳ ಸೀಲ್ ಡೌನ್ ತೆರವುಗೊಳಿಸಲಾಗಿದೆ.
ಸಧ್ಯಕ್ಕೆ ಬೆಳಗಾವಿ ನಗರದಲ್ಲಿ ಸದಾಶಿವ ನಗರ ಮಾತ್ರ ಕಮಟೈನ್ಮೆಂಟ್ ಝೋನ್ ಆಗಿದೆ. ಇಲ್ಲಿ ಮೊನ್ನೆಯಷ್ಟೆ ಗರ್ಭಿಣಿ ಮಹಿಳೆಯೊರ್ವಳಿಗೆ ಸೋಂಕು ಪತ್ತೆಯಾಗಿದೆ. ಈ ಪ್ರದೇಶದ ಇನ್ನೂ ಹಲವಾರು ಜನರ ಗಂಟಲು ದ್ರವಗಳನ್ನು ಪರೀಕ್ಷೆಗೆ ಕಳಿಸಲಾಗಿದೆ. ಅವುಗಳ ವರದಿ ಬಂದ ನಂತರ ಇಲ್ಲಿನ ಪರಿಸ್ಥಿತಿ ಗೊತ್ತಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ