Kannada NewsKarnataka NewsLatest

ಬೆಳಗಾವಿಯಲ್ಲಿ 3 ದಿನ ಸಂಪೂರ್ಣ ಲಾಕ್ ಡೌನ್; ಹೊಸ ಆದೇಶ

ತರಕಾರಿ, ದಿನಸಿ ಖರೀದಿಗೆ ಕೂಡ ಅವಕಾಶವಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ 3 ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿಗಳು ಇಂದು ಹೊಸ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 22, 23 ಹಾಗೂ 24ರಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಆದೇಶ ಹೊರಡಿಸಲಾಗಿದೆ.

22ರ ಬೆಳಗ್ಗೆ 6 ಗಂಟೆಯಿಂದ 24ರ ಬೆಳಗ್ಗೆ 6 ಗಂಟೆಯವರೆಗೂ ಲಾಕ್ ಡೌನ್ ಇರಲಿದೆ. ಇದು ಈಗಾಗಲೆ ಜಾರಿಯಲ್ಲಿರುವ ಲಾಕ್ ಡೌನ್ ಗಿಂತಲೂ ಕಠಿಣವಾಗಿರಲಿದೆ.

ಈ ಅವಧಿಯಲ್ಲಿ ಆಸ್ಪತ್ರೆಗಳಿಗೆ ಸಂಚರಿಸಲು, ಹಾಲು, ಔಷಧಿ ಖರೀದಿಸಲು, ಪೂರೈಸಲು ಮಾತ್ರ ಅವಕಾಶವಿದೆ.

Home add -Advt

ಅಂತರ ಜಿಲ್ಲಾ, ಅಂತರ್ ರಾಜ್ಯ ಸರಕು ಸಾಗಿಣಿಕೆ ವಾಹನಗಳಿಗೆ ಅವಕಾಶವಿದೆ.

ಪೂರ್ವಾನುಮತಿ ಪಡೆದುಕೊಂಡು ನಿಗದಿಪಡಿಸಿರುವ ಮದುವೆಗಳಿಗೆ ಅವಕಾಶವಿದೆ.

ಅಂದರೆ, ತರಕಾರಿ, ದಿನಸಿ ಖರೀದಿಗಳಿಗೆ ಈಗಿನಂತೆ ಬೆಳಗಿನ ಅವಧಿಯಲ್ಲಿ ಕೂಡ ಅವಕಾಶವಿಲ್ಲ.

ಜಿಲ್ಲಾಧಿಕಾರಿಗಳಿಗೆ ಲಾಕ್ ಡೌನ್ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಅಧಿಕಾರ ನೀಡುತ್ತಿದ್ದಂತೆ ಬೆಳಗಾವಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

ಸಮಗ್ರ ಆದೇಶ ಇಲ್ಲಿದೆ. –

ರಾಜ್ಯದಲ್ಲಿ ಲಾಕ್ ಡೌನ್ ಇನ್ನೂ 14 ದಿನ ವಿಸ್ತರಣೆ – ಸಿಎಂ ಘೋಷಣೆ (ವಿಡಿಯೋ ಸಹಿತ ವರದಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button