ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರೇಲ್ ವಿಕಾಸ ನಿಗಮದಿಂದ ತಾನಾಜಿಗಲ್ಲಿ- ಫುಲಬಾಗ ಗಲ್ಲಿ ರೈಲ್ವೆ ಗೇಟ್ ಲೆವೆಲ್ ಕ್ರಾಸಿಂಗ್ [LC-386] ಹತ್ತಿರ ರೈಲ್ವೆ ಲೈನ್‌ಗಳ ಡಬ್ಲಿಂಗ್ ಕಾರ್ಯ ಕೈಕೊಳ್ಳುತ್ತಿದ್ದರಿಂದ ಬೆಳಗಾವಿಯಲ್ಲಿ 3 ದಿನ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ದಿನಾಂಕ: 19/02/2022 ರಂದು ಮುಂಜಾನೆ 9 ಗಂಟೆಯಿಂದ 21/02/2022 ರ ರಾತ್ರಿ 11 ಗಂಟೆಯವರೆಗೆ 3 ದಿನಗಳ ಮಟ್ಟಿಗೆ ತಾನಾಜಿಗಲ್ಲಿ-ಫುಲಬಾಗ್ ಗಲ್ಲಿ ರಸ್ತೆ ಬಂದ್ ಮಾಡುತ್ತಿರುವುದರಿಂದ ಆ ಕಾಲಕ್ಕೆ ಸಾರ್ವಜನಿಕರ ಸುಗಮ ಸಂಚಾರ ಕಲ್ಪಸುವ ನಿಟ್ಟಿನಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ.
1) ಯಶ್ ಆಸ್ಪತ್ರೆ ಕಡೆಯಿಂದ ತಾನಾಜಿಗಲ್ಲಿ ರೈಲ್ವೆ ಟ್ರ್ಯಾಕ್ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಮಹಾದ್ವಾರ ರಸ್ತೆ ಮುಖಾಂತರ ಹಳೆ ಪಿಬಿ ರಸ್ತೆ ಸೇರಿ ಮುಂದೆ ಸಾಗುವುದು.
2) ದೇಶಪಾಂಡೆ ಪೆಟ್ರೋಲ್ ಪಂಪ್‌ದಿಂದ ತಾನಾಜಿ ಗಲ್ಲಿ ರೈಲ್ವೆ ಟ್ರ್ಯಾಕ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ದೇಶಪಾಂಡೆ ಪೆಟ್ರೋಲ್ ಪಂಪ್, ಪಿಂಪಳಕಟ್ಟಾ, ಪಾಟೀಲ ಗಡ್ಡೆ, ಶನಿಮಂದಿರ ಮುಖಾಂತರ ಸಂಚರಿಸುವುದು.
3) ಶನಿಮಂದಿರ, ಪಾಟೀಲ ಗಲ್ಲಿ. ಪಿಂಪಳಕಟ್ಟಾ ಕಡೆಯಿಂದ ಬಂದು ತಾನಾಜಿ ಗಲ್ಲಿ ರೈಲ್ವೆ ಟ್ರ್ಯಾಕ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ದೇಶಪಾಂಡೆ ಪೆಟ್ರೋಲ್ ಪಂಪ್ ಜೀಜಾಮಾತಾ ಸರ್ಕಲ್, ಹಳೆ ಪಿಬಿ ರಸ್ತೆ ಮುಖಾಂತರ ಸಂಚರಿಸಿ ಮುಂದೆ ಸಾಗುವುದು.
ಚಿತ್ರಾ ರಾಮಕೃಷ್ಣ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ