ಕೆಎಲ್ಎಸ್ ಜಿಐಟಿಯಲ್ಲಿ ಇಂದಿನಿಂದ 3 ದಿನಗಳ “ಔರಾ- 2024” ಸಾಂಸ್ಕೃತಿಕ ಉತ್ಸವ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂದಿನಿಂದ 3 ದಿನಗಳ ಕಾಲ (13 ರಿಂದ 15 ಮಾರ್ಚ್ 2024 ರವರೆಗೆ) ಸಾಂಸ್ಕೃತಿಕ ಉತ್ಸವ “ಔರಾ-2024” ಕಾರ್ಯಕ್ರಮ “ದೇಸಿ ಸ್ವರಮೇಳ” ಎನ್ನುವ ಘೋಷ ವಾಕ್ಯದೊಂದಿಗೆ ನಡೆಯಲಿದೆ. ವಿದ್ಯಾರ್ಥಿಗಳು ಅವರ ವೈವಿಧ್ಯಮಯ ಕೌಶಲ್ಯಗಳನ್ನು ಪ್ರದರ್ಶಿಸಲು, ಇದು ಒಂದು ಉತ್ತಮವಾದ ರಾಷ್ಟೀಯ ವೇದಿಕೆಯನ್ನು ಒದಗಿಸಲಿದೆ. ಮೂರು ದಿನಗಳ ಈ ಸಾಂಸ್ಕೃತಿಕ ಸ್ಪರ್ಧಾ ಉತ್ಸವದಲ್ಲಿ ಆಶುಭಾಷಣ , ತೆರೆದ ಮೈಕ್ , ನೃತ್ಯ, ಸಾಹಿತ್ಯ, ಸಂಗೀತ, , ಇ-ಗೇಮಿಂಗ್, ಫೈನ್ ಆರ್ಟ್ಸ್, ಡ್ರಾಮಾ, , ಫ್ಯಾಶನ್ ಶೋ, , ರಸಪ್ರಶ್ನೆ, ಮತ್ತು ಇತರ 46 ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಲ್ಲ ಪದವಿ ವಿಭಾಗಗಳ ವಿಧ್ಯಾರ್ಥಿಗಳಿಗೆ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ 80 ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕೆಎಲ್ಎಸ್ ಜಿಐಟಿ ನಡೆಸುತ್ತಿರುವ “ಔರಾ-2024” ರಲ್ಲಿ 15 ಮಾರ್ಚ್ 2023 ರಂದು ಸಂಜೆ 6.30 ಗಂಟೆಗೆ ಕೆಎಲ್ಎಸ್ ಜಿಐಟಿ ಕಾಲೇಜು ಮೈದಾನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿಯಾದ ಶ್ರೇಯಾ ಘೋಷಾಲ್ ಇವರು ಗಾಯನ ಪ್ರದರ್ಶನ ನೀಡಲಿದ್ದಾರೆ . ಈ ಮೂರು ದಿನಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲು ನೋಂದಾಯಿಸಿದ್ದಾರೆ . ಈ ಹಿಂದಿನ ಔರಾದ ಆವೃತ್ತಿಗಳಲ್ಲಿ, ಪ್ರಸಿದ್ಧ ಹಿನ್ನೆಲೆ ಗಾಯಕರಾದ ಲೇಟ್ ಕೆ.ಕೆ. , ಸುನಿಧಿ ಚೌಹಾಣ, ಫರ್ಹಾನ್ ಅಕ್ತರ್, … Continue reading ಕೆಎಲ್ಎಸ್ ಜಿಐಟಿಯಲ್ಲಿ ಇಂದಿನಿಂದ 3 ದಿನಗಳ “ಔರಾ- 2024” ಸಾಂಸ್ಕೃತಿಕ ಉತ್ಸವ
Copy and paste this URL into your WordPress site to embed
Copy and paste this code into your site to embed