GIT add 2024-1
Laxmi Tai add
Beereshwara 33

ಕೆಎಲ್ಎಸ್ ಜಿಐಟಿಯಲ್ಲಿ ಇಂದಿನಿಂದ 3 ದಿನಗಳ “ಔರಾ- 2024” ಸಾಂಸ್ಕೃತಿಕ ಉತ್ಸವ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂದಿನಿಂದ 3 ದಿನಗಳ ಕಾಲ (13 ರಿಂದ 15 ಮಾರ್ಚ್ 2024 ರವರೆಗೆ) ಸಾಂಸ್ಕೃತಿಕ ಉತ್ಸವ “ಔರಾ-2024” ಕಾರ್ಯಕ್ರಮ “ದೇಸಿ ಸ್ವರಮೇಳ”  ಎನ್ನುವ ಘೋಷ  ವಾಕ್ಯದೊಂದಿಗೆ  ನಡೆಯಲಿದೆ.

ವಿದ್ಯಾರ್ಥಿಗಳು ಅವರ ವೈವಿಧ್ಯಮಯ ಕೌಶಲ್ಯಗಳನ್ನು ಪ್ರದರ್ಶಿಸಲು, ಇದು ಒಂದು ಉತ್ತಮವಾದ  ರಾಷ್ಟೀಯ  ವೇದಿಕೆಯನ್ನು ಒದಗಿಸಲಿದೆ. ಮೂರು ದಿನಗಳ ಈ ಸಾಂಸ್ಕೃತಿಕ ಸ್ಪರ್ಧಾ ಉತ್ಸವದಲ್ಲಿ   ಆಶುಭಾಷಣ , ತೆರೆದ ಮೈಕ್ , ನೃತ್ಯ, ಸಾಹಿತ್ಯ, ಸಂಗೀತ, , ಇ-ಗೇಮಿಂಗ್, ಫೈನ್ ಆರ್ಟ್ಸ್, ಡ್ರಾಮಾ, , ಫ್ಯಾಶನ್ ಶೋ, , ರಸಪ್ರಶ್ನೆ,  ಮತ್ತು ಇತರ 46 ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಲ್ಲ ಪದವಿ ವಿಭಾಗಗಳ ವಿಧ್ಯಾರ್ಥಿಗಳಿಗೆ ಕೌಶಲ್ಯ ಪ್ರದರ್ಶನಕ್ಕೆ  ವೇದಿಕೆಯಾಗಲಿದೆ. ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ 80 ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಕೆಎಲ್ಎಸ್ ಜಿಐಟಿ ನಡೆಸುತ್ತಿರುವ “ಔರಾ-2024” ರಲ್ಲಿ 15 ಮಾರ್ಚ್ 2023 ರಂದು ಸಂಜೆ  6.30 ಗಂಟೆಗೆ ಕೆಎಲ್ಎಸ್ ಜಿಐಟಿ ಕಾಲೇಜು ಮೈದಾನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿಯಾದ ಶ್ರೇಯಾ ಘೋಷಾಲ್ ಇವರು ಗಾಯನ ಪ್ರದರ್ಶನ ನೀಡಲಿದ್ದಾರೆ . ಈ ಮೂರು ದಿನಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲು ನೋಂದಾಯಿಸಿದ್ದಾರೆ .

Emergency Service

ಈ ಹಿಂದಿನ ಔರಾದ ಆವೃತ್ತಿಗಳಲ್ಲಿ, ಪ್ರಸಿದ್ಧ ಹಿನ್ನೆಲೆ ಗಾಯಕರಾದ  ಲೇಟ್ ಕೆ.ಕೆ. , ಸುನಿಧಿ ಚೌಹಾಣ, ಫರ್ಹಾನ್ ಅಕ್ತರ್, ಶಂಕರ್ ಮಹಾದೇವನ್, ವಿಶಾಲ್-ಶೇಖರ್, ಅಮಿತ್ ತ್ರಿವೇದಿ, ಅರ್ಮಾನ್ ಮಲಿಕ್ ಮತ್ತು ನೀತಿ ಮೋಹನ್ ರಂತಹ ಖ್ಯಾತ ಹಿನ್ನೆಲೆ ಗಾಯಕರು ಗಾಯನ ಪ್ರದರ್ಶನಗಳನ್ನು ನೀಡುವ ಮೂಲಕ ಮನರಂಜನೆ ನೀಡಿದ್ದಾರೆ.

ಕೆಎಲ್ಎಸ್ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಉತ್ತಮ -ಗುಣಮಟ್ಟದ  ಶಿಕ್ಷಣವನ್ನು  ನೀಡುವುದರೊಂದಿಗೆ  ವಿದ್ಯಾರ್ಥಿಗಳ  ಸರ್ವತೋಮುಖ  ಬೆಳವಣಿಗೆಗೆ  ಸಹ-ಪಠ್ಯೇತರ, ಚಟುವಟಿಕೆಗಳನ್ನೂ  ಬೆಂಬಲಿಸುತ್ತಿದೆ. ಈ ಔರಾ ಉತ್ಸವದ ಗಾಯನ ಪ್ರದರ್ಶನವನ್ನು  ಗೌರವಾನ್ವಿತ ಅತಿಥಿಗಳು, ಗಣ್ಯರು, ಪ್ರತಿನಿಧಿಗಳು, ಮತ್ತು ಕೆಎಲ್ಎಸ್ ಆಡಳಿತ ಮಂಡಳಿಯ ಸದಸ್ಯರು ವೀಕ್ಷಿಸಲಿದ್ದಾರೆ.  

Bottom Add3
Bottom Ad 2