Kannada NewsKarnataka NewsPolitics

*ವಿಧಾನಸಭೆ ಚುನಾವಣೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಶಾಸಕ ಸೋಮಶೇಖರ್*

ಪ್ರಗತಿವಾಹಿನಿ ಸುದ್ದಿ: ಮುಂಬರುವ ವಿಧಾನಸಭೆ ಚುನಾವಣೆ ಬಗ್ಗೆ ಮಾಜಿ ಸಚಿವ, ಶಾಸಕ ಎಸ್.ಟಿ.ಸೋಮಶೇಖರ್ ಶಾಅಕಿಂಗ್ ಹೇಳಿಕೆ ನೀಡಿದ್ದು, ರಾಅಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಈಗಿನ ಸರ್ಕಾರದ ಅವಧಿ 2028ಕ್ಕೆ ಅಂತ್ಯವಾಗಲಿದ್ದು, ಬಳಿಕ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಆದರೆ, ಈ ಬಾರಿ 2028ರಲ್ಲಿ ಎಲೆಕ್ಷನ್ ನಡೆಯಲ್ಲ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮಶೇಖರ್, 2028ರಲ್ಲಿ ವಿಧಾನಸಭೆ ಚುನಾವಣೆ ನಡೆಯಲ್ಲ, ಬದಲಿಗೆ 2029ರಲ್ಲಿ ನಡೆಯಲಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಜೆಡಿಎಸ್ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಯಾವ್ ಸಭೆ ಆಗಿತ್ತು? ಬಿಜೆಪಿ ಜೆಡಿಎಸ್ ನಮಗೆ ಸಂಬಂಧ ಇಲ್ಲ. ನಾನ್ಯಾಕೆ ಸಭೆಗೆ ಹೋಗಲಿ? 2029ಕ್ಕೆ ಚುನಾವಣೆ ಇದೆ . 2028ಕ್ಕೆ ಇವರು ಚುನಾವಣೆ ಮಾಡಲ್ಲ . ಡಿ ಲಿಮಿಟೇಶನ್ ಗೆ ಅಂತ ಇದೆ. ಅದಕ್ಕೆ ಪ್ರಧಾನಮಂತ್ರಿಗಳು ಹೇಳಿದ್ದಾರಲ್ಲ. ಅದಕ್ಕಾಗಿ ಈಗ ಅರ್ಜೆಂಟ್ ಏನಿದೆ? ಎಂದರು.

ಸಿಎಂ ಅವರು ನನಗೆ 25 ವರ್ಷದಿಂದ ಆತ್ಮೀಯರಾಗಿದ್ದು, ರಾಜಕೀಯಕ್ಕೆ ಅವರು ಸಹಕಾರ ಕೊಟ್ಟಿದಾರೆ. ಸಹಕಾರ ಕ್ಷೇತ್ರದಲ್ಲೂ ಅವರು ಸಹಕಾರ ಕೊಟ್ಟಿದಾರೆ. ಅದೇ ವಿಶ್ವಾಸದಿಂದ ಅವರು ನಾವು ಸ್ನೇಹ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.


Related Articles

Back to top button