Kannada NewsKarnataka NewsLatest

*ಕೆಎಲ್ಎಸ್ ಜಿಐಟಿ ಯಲ್ಲಿ ಸಾಂಸ್ಕೃತಿಕ ರಂಗಭೂಮಿಯ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ: ಇದೇ ಜನವರಿ 30 ರಂದು ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ, ಸ್ಪಿಕ್ ಮ್ಯಾಕೆ ಸಹಯೋಗದೊಂದಿದೆ, ಶ್ರೀ ಮಾರ್ಗಿ ಮಧು ಅವರಿಂದ “ಕೂಡಿಯಟ್ಟಮ್” ಸಂಸ್ಕೃತ ರಂಗಭೂಮಿಯ ವಿಶೇಷ ಪ್ರದರ್ಶನವನ್ನು , ಸಂಜೆ 4 ಗಂಟೆಗೆ ಕೆಎಲ್ಎಸ್ ಜಿಐಟಿಯ ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

“ಕೂಡಿಯಟ್ಟಮ್” ಎಂಬುದು ಕೇರಳ ರಾಜ್ಯದಲ್ಲಿ ಸಾಂಪ್ರದಾಯಿಕವಾಗಿ ಪ್ರದರ್ಶನಗೊಳ್ಳುವ ಒಂದು ರಂಗಭೂಮಿಯ ರೂಪವಾಗಿದೆ ಮತ್ತು ಇದು 2000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ.

45 ವರ್ಷಗಳ ಹಿಂದೆ ಸ್ಥಾಪಿತವಾದ , ಸ್ಪಿಕ್ ಮ್ಯಾಕೆ (ಸೊಸೈಟಿ ಫಾರ್ ದಿ ಪ್ರಮೋಷನ್ ಆಫ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಆಯಂಡ್ ಕಲ್ಚರ್ ಅಮಂಗ್ಸ್ಟ ಯೂಥ್) ರಾಷ್ಟ್ರವ್ಯಾಪಿ, ರಾಜಕೀಯೇತರ, ಜನರ ಆಂದೋಲನ ಮತ್ತು ನೋಂದಾಯಿತ ಸಂಘವಾಗಿದ್ದು, ಶಾಸ್ತ್ರೀಯ ಸಂಗೀತ , ಜಾನಪದ ಸಂಗೀತ ಮತ್ತು ನೃತ್ಯ, ಧ್ಯಾನ, ಯೋಗ, ಸಿನಿಮಾ ಕ್ಲಾಸಿಕ್ ಪ್ರದರ್ಶನಗಳು, ಗಣ್ಯ ವ್ಯಕ್ತಿಗಳ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಭಾರತೀಯ ಪರಂಪರೆಯಲ್ಲಿ ಸಕ್ರಿಯ ಆಸಕ್ತಿಯನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಶಾಲಾ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ವಿಶಿಷ್ಟ ಕಾರ್ಯಾಗಾರಗಳನ್ನೂ ನಡೆಸುತ್ತಿದ್ದು , ಇದರ ಸ್ವಯಂಸೇವಕರು ಭಾರತ ಮತ್ತು ವಿದೇಶದ 800 ಕ್ಕೂ ಹೆಚ್ಚಿನ ಸ್ಥಳ ಗಳಲ್ಲಿ , 5000 ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕೆಎಲ್‌ಎಸ್ ಜಿಐಟಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ , ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.

ಜಿಆಯ್ ಟಿ ಪ್ರಾಂಶುಪಾಲರಾದ, ಡಾ. ಎಂ.ಎಸ್.ಪಾಟೀಲ, ಈ ಕಾರ್ಯಕ್ರಮಕ್ಕೆ ರಂಗಭೂಮಿ ಕಲಾಭಿಮಾನಿಗಳು ಬಂದು ಪ್ರದರ್ಶನ ವೀಕ್ಷಿಸಲು ಕರೆ ನೀಡಿದ್ದಾರೆ.

Related Articles

Back to top button