Belagavi NewsBelgaum NewsKannada NewsKarnataka News

*ಎಂಇಎಸ್ ಪುಂಡರು ಬಾಲ ಬಿಚ್ಚಿದ್ರೆ ಹುಷಾರ್: ಎಚ್ಚರಿಕೆ ನೀಡಿದ ಕರವೇ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮೀತಿ ಹಾಗೂ ಶಿವಸೇನೆ ಪುಂಡರು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ವಿರೋಧಿ ಚಟುವಟಿಕೆ ಮಾಡುತ್ತಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ.‌

ಮಹಾರಾಷ್ಟ್ರ ಏಕೀಕರಣ ಸಮೀತಿ ಹಾಗೂ ಶಿವಸೇನೆ ಪುಂಡರು ಇತ್ತೀಚಿಗೆ ಪಾಲಿಕೆ ಮೇಯರ್ ಅವರಿಗೆ ಭೇಟಿ ಆಗಿ ಪಾಲಿಕೆಯಲ್ಲಿ ಮರಾಠಿ ಭಾಷೆ ಬಳಕೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.‌ 

Home add -Advt

ಎಂಇಎಸ್ ಮುಖಂಡರ ಮಾತು ಕೇಳಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ವಿರೋಧಿ ಚಟುವಟಿಕೆ, ಕನ್ನಡಕ್ಕೆ ಅವಮಾನಿಸುವ ಯಾವುದೇ ಚಟುಚಟಿಕೆಗಳು ಪಾಲಿಕೆಯಲ್ಲಿ ನಡೆದರೆ ಕರವೇ ಕಾರ್ಯಕರ್ತರು ಪಾಲಿಕೆಗೆ ಮುತ್ತಿಗೆ ಹಾಕಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. 

ಇಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೇಯರ ಮಂಗೇಶ ಪವಾರ ಹಾಗೂ ಉಪಮೇಯರ ವಾಣಿ ಜೋಶಿ ಅವರನ್ನು ಭೇಟಿಯಾಗಿ ಬೆಳಗಾವಿ ಮಹಾನಗರದಲ್ಲಿ ಸರ್ಕಾರದ ಆದೇಶದ ಪ್ರಕಾರ ಕನ್ನಡವನ್ನು ಕಡ್ಡಾಯಗೊಳಸುವ ಎಲ್ಲ ಕ್ಷೇತ್ರಗಳಲ್ಲಿ ಕನ್ನಡದ ಅನುಷ್ಠಾನ ಮಾಡುವ ಕಾರ್ಯ ನಡೆದಿದೆ. ಮಹಾರಾಷ್ಟ್ರ ಏಕೀಕರಣ ಸಮೀತಿಯ ಮುಖಂಡರ ತಮ್ಮನ್ನು ಭೇಟಿಯಾಗಿ ಕನ್ನಡದ ಫಲಕಗಳನ್ನು ತೆರವು ಮಾಡುವಂತೆ ಪುಂಡಾಟಿಕೆ ನಡೆಸಿದ್ದು, ಯಾವುದೇ ಕಾರಣಕ್ಕೂ ತಾವು ಎಂಇಎಸ್ ಮುಖಂಡರ ಪುಂಡಾಟಿಕೆಗೆ ಹೆದರದೇ ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಕಡ್ಡಾಯವನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

Related Articles

Back to top button