*BREAKING: ಶಾಸಕ ಅಭಯ್ ಪಾಟೀಲ್ ವಿರುದ್ಧ ಗಂಭೀರ ಆರೋಪ: ದಾಖಲೆ ಬಿಡುಗಡೆ ಮಾಡಿದ ಬಿ.ಕೆ.ಹರಿಪ್ರಸಾದ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬೆಳಗಾವಿಯಲ್ಲಿ ಮತದಾರರ ಹೆಸರನ್ನು ಡಿಲಿಟ್ ಮಾಡುವಂತೆ ಶಾಸಕ ಅಭಯ್ ಪಾಟೀಲ್ ಪತ್ರ ಬರೆದಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದಾಖಲೆ ಬಿಡುಗಡೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಕೆ.ಹರಿಪ್ರಸಾದ್, ಎಸ್ ಐಆರ್ ಪ್ರಕ್ರಿಯೆ ವೇಳೆ ಬೆಳಗಾವಿಯಲ್ಲಿ 2000 ಮತದಾರರ ಹೆಸರು ಡಿಲಿಟ್ ಮಾಡಲು ಅಭಯ್ ಪಾಟೀಲ್ ಅರ್ಜಿ ನೀಡಿದ್ದಾರೆ ಎಂದು ಆರೋಪಿಸಿದರು.
ಮತದಾರರ ಹೆಸರು ಡಿಲಿಟ್ ಮಾಡಿ ಎಂದು ಪತ್ರ ಬರೆಯಲು ಇವರು ಯಾರು? ಅಭಯ್ ಪಾಟೀಲ್ ಬರೆದಿರುವ ಪತ್ರ ನಮ್ಮ ಬಳಿ ಇದೆ ಎಂದು ದಾಖಲೆ ಬಿಡುಗಡೆ ಮಾಡಿದರು. ಮತದಾರರ ಹೆಸರು ಡಿಲಿಟ್ ಮಾಡುವಂತೆ ಕಾನೂನು ಮೀರಿ ಶಾಸಕರು ಬಲ್ಕ್ ಡಿಲೀಷನ್ ಗೆ ಪತ್ರ ನೀಡಿದ್ದಾರೆ.
ಶಾಸಕ ಅಭಯ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




