Belagavi NewsBelgaum NewsKannada NewsKarnataka NewsLatest

*ಲೈಲಾ ಶುಗರ್ಸ್‌ನಿಂದ ಪ್ರತಿ ಟನ್ ಕಬ್ಬಿಗೆ ₹4,000 ದರ ಘೋಷಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2026-27ನೇ ಸಾಲಿನ ಕಬ್ಬಿಣದ ನುರಿಸುವ ಹಂಗಾಮಿಗೆ ಸ್ಥಳೀಯ ಲೈಲಾ ಶುಗರ್ಸ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್‌ಗೆ ₹4,000 ದರ ನೀಡುವುದಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಘೋಷಿಸಿದ್ದಾರೆ.

ಸೋಮವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಘೋಷಿತ ದರವನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.

ಮೊದಲ ಕಂತಿನಲ್ಲಿ ಪ್ರತಿ ಟನ್‌ಗೆ ₹400 ಅನ್ನು ರೈತರು ಕಬ್ಬು ಪೂರೈಸಿದ ದಿನವೇ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಎರಡನೇ ಕಂತಿನಲ್ಲಿ ಪ್ರತಿ ಟನ್‌ಗೆ ₹3,400ರಂತೆ 15 ದಿನಗಳಿಗೊಮ್ಮೆ ಹಣ ಪಾವತಿಸಲಾಗುತ್ತದೆ.

ಮೂರನೇ ಕಂತಿನಲ್ಲಿ ಪ್ರತಿ ಟನ್‌ಗೆ ₹100 ಅನ್ನು 2027ರ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪಾವತಿಸಲಾಗುವುದು. ನಾಲ್ಕನೇ ಹಾಗೂ ಅಂತಿಮ ಕಂತಿನ ಹಣವನ್ನು ಮುಂದಿನ ಕಬ್ಬು ನುರಿಸುವ ಹಂಗಾಮಿನ ಒಳಗಾಗಿ ರೈತರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರೈತರು ಲೈಲಾ ಶುಗರ್ಸ್ ಕಾರ್ಖಾನೆಗೆ ಕಬ್ಬು ಪೂರೈಸುವ ಮೂಲಕ ಸಹಕರಿಸಬೇಕು ಎಂದು ಸದಾನಂದ ಪಾಟೀಲ ಮನವಿ ಮಾಡಿದ್ದಾರೆ.

Related Articles

Back to top button