
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಸೇಶನ್ ಜಿತೋ ಬೆಳಗಾವಿ ಘಟಕದ ಸದಸ್ಯ ವಿಕ್ರಮ ಜೈನ ಅವರಿಗೆ 2025-26 ನೇ ಸಾಲಿನ ಜಿತೋ ರತ್ನ ಪ್ರಶಸ್ತಿ ಲಭಿಸಿದೆ.
ಸನ್ 2025-26 ನೇ ಸಾಲಿನಲ್ಲಿ ವಿಕ್ರಮ ಜೈನ ಅವರು ಹರ್ಷೋತ್ಸವ ಕಾರ್ಯಕ್ರಮ, ಜಿತೋ ನಗರ ಪ್ರತಿನಿಧಿಗಳ ಸಮಾವೇಶ, ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅವುಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹಿನ್ನಲೆಯಲ್ಲಿ ಅವರಿಗೆ 2025-26 ನೇ ಸಾಲಿನ ಜಿತೋ ರತ್ನ ಪ್ರಶಸ್ತಿ ಘೋಶಿಸಲಾಯಿತು.
ರವಿವಾರ ಸಾಯಂಕಾಲ ನಗರದ ಫೌಂಡ್ರಿ ಕ್ಲಸ್ಟರ ಸಭಾಗೃಹ ದಲ್ಲಿ ಜೀತೊ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ, ಹಾಗೂ ಇನ್ನಿತರ ಗಣ್ಯರು ವಿಕ್ರಮ ಜೈನ ಅವರಿಗೆ ಜಿತೋ ರತ್ನ ಪ್ರಶಸ್ತಿ ವಿತರಿಸಿ ಗೌರವಿಸಿದರು.



