ಕೆಎಲ್ಎಸ್ ಜಿಐಟಿಯಲ್ಲಿ ಇಂದಿನಿಂದ 3 ದಿನಗಳ “ಔರಾ- 2024” ಸಾಂಸ್ಕೃತಿಕ ಉತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂದಿನಿಂದ 3 ದಿನಗಳ ಕಾಲ (13 ರಿಂದ 15 ಮಾರ್ಚ್ 2024 ರವರೆಗೆ) ಸಾಂಸ್ಕೃತಿಕ ಉತ್ಸವ “ಔರಾ-2024” ಕಾರ್ಯಕ್ರಮ “ದೇಸಿ ಸ್ವರಮೇಳ”  ಎನ್ನುವ ಘೋಷ  ವಾಕ್ಯದೊಂದಿಗೆ  ನಡೆಯಲಿದೆ. ವಿದ್ಯಾರ್ಥಿಗಳು ಅವರ ವೈವಿಧ್ಯಮಯ ಕೌಶಲ್ಯಗಳನ್ನು ಪ್ರದರ್ಶಿಸಲು, ಇದು ಒಂದು ಉತ್ತಮವಾದ  ರಾಷ್ಟೀಯ  ವೇದಿಕೆಯನ್ನು ಒದಗಿಸಲಿದೆ. ಮೂರು ದಿನಗಳ ಈ ಸಾಂಸ್ಕೃತಿಕ ಸ್ಪರ್ಧಾ ಉತ್ಸವದಲ್ಲಿ   ಆಶುಭಾಷಣ , ತೆರೆದ ಮೈಕ್ , ನೃತ್ಯ, ಸಾಹಿತ್ಯ, ಸಂಗೀತ, , ಇ-ಗೇಮಿಂಗ್, ಫೈನ್ ಆರ್ಟ್ಸ್, ಡ್ರಾಮಾ, , ಫ್ಯಾಶನ್ ಶೋ, , ರಸಪ್ರಶ್ನೆ,  ಮತ್ತು ಇತರ 46 ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಲ್ಲ ಪದವಿ ವಿಭಾಗಗಳ ವಿಧ್ಯಾರ್ಥಿಗಳಿಗೆ ಕೌಶಲ್ಯ ಪ್ರದರ್ಶನಕ್ಕೆ  ವೇದಿಕೆಯಾಗಲಿದೆ. ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ 80 ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.Home add -Advt ಕೆಎಲ್ಎಸ್ ಜಿಐಟಿ ನಡೆಸುತ್ತಿರುವ “ಔರಾ-2024” ರಲ್ಲಿ 15 ಮಾರ್ಚ್ 2023 ರಂದು ಸಂಜೆ  6.30 ಗಂಟೆಗೆ ಕೆಎಲ್ಎಸ್ ಜಿಐಟಿ ಕಾಲೇಜು ಮೈದಾನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿಯಾದ ಶ್ರೇಯಾ ಘೋಷಾಲ್ ಇವರು ಗಾಯನ ಪ್ರದರ್ಶನ ನೀಡಲಿದ್ದಾರೆ . ಈ ಮೂರು ದಿನಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲು ನೋಂದಾಯಿಸಿದ್ದಾರೆ . ಈ ಹಿಂದಿನ ಔರಾದ ಆವೃತ್ತಿಗಳಲ್ಲಿ, ಪ್ರಸಿದ್ಧ ಹಿನ್ನೆಲೆ ಗಾಯಕರಾದ  ಲೇಟ್ ಕೆ.ಕೆ. , … Continue reading ಕೆಎಲ್ಎಸ್ ಜಿಐಟಿಯಲ್ಲಿ ಇಂದಿನಿಂದ 3 ದಿನಗಳ “ಔರಾ- 2024” ಸಾಂಸ್ಕೃತಿಕ ಉತ್ಸವ