
ಪ್ರಗತಿವಾಹಿನಿ ಸುದ್ದಿ, ಚಿಕ್ಕಮಗಳೂರು: ಪ್ರಮುಖ 3 ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ಸರಕಾರಿ ನೌಕರರು ಅನಿರ್ಧಿಷ್ ಹೋರಾಟಕ್ಕೆ ನಿರ್ಧರಿಸಿದ್ದಾರೆ. ಜುಲೈ ಅಂತ್ಯ ಇಲ್ಲವೆ ಆಗಷ್ಟ್ 1ರಿಂದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
*ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಅವರು 7ನೆಯ ವೇತನ ಆಯೋಗದ ವರದಿ ಯಥಾವತ್ ಜಾರಿ ಮತ್ತು ಎನ್ ಪಿಎಸ್ ರದ್ದುಪಡಿಸಿ ಒಪಿಎಸ್ ಮರು ಜಾರಿ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಒತ್ತಾಯಿಸಿ ಜುಲೈ ಅಂತ್ಯ ಅಥವಾ ಆಗಷ್ಟ್ 1 ನೆಯ ತಾರೀಖಿನಿಂದ ಅನಿರ್ದಿಷ್ಟ ಹೋರಾಟ ಮಾಡಲು ಮಂಡಿಸಿದ ವಿಷಯಕ್ಕೆ ಎಲ್ಲರೂ ಜೋರಾಗಿ ಚಪ್ಪಾಳೆ ಮೂಲಕ, ಘೋಷಣೆಗಳ ಮೂಲಕ ಕರಾತಾಡತನದಿಂದ ಒಕ್ಕೊರಲಿನಿಂದ ಒಪ್ಪಿ ತೀರ್ಮಾನ ಮಾಡಲಾಯಿತು. ಎಲ್ಲ ನೌಕರರು ನಮ್ಮ ಭವಿಷ್ಯದ ಭದ್ರತೆಗಾಗಿ ಹೋರಾಟಕ್ಕೆ ಅಣಿಯಾಗೋಣ ಹಾಗೂ ನೌಕರರ ಸಂಘದ ಜೊತೆಗೆ ಕೈ ಜೋಡಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎನ್ನುವ ಕರೆ ನೀಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ