Latest

ಮಹಿಳೆ ಮೇಲೆ ವೈದ್ಯರಿಂದ ಗ್ಯಾಂಗ್ ರೇಪ್

ಪ್ರಗತಿವಾಹಿನಿ ಸುದ್ದಿ; ಲಖನೌ: ಮಹಿಳೆಯ ಮೇಲೆ ಮೂವರು ವೈದ್ಯರು ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ.

ಮಹಿಳೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯರಾದ ಮೂವರು ವೈದರು ಆರಂಭದಲ್ಲಿ ಸ್ನೇಹಬೆಳೆಸಿಕೊಂಡಿದ್ದಾರೆ. ಸ್ನೇಹದ ನೆಪದಲ್ಲಿ ಭೇಟಿಯಾಗುವಂತೆ ಆಸ್ಪತ್ರೆಗೆ ಕರೆದಿದ್ದಾರೆ. ಫ್ರೆಂಡ್ ಶಿಪ್ ಎಂದು ಮಹಿಳೆ ವೈದ್ಯರನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗಿದ್ದಾಳೆ. ಈ ವೇಳೆ ಆಸ್ಪತ್ರೆಯ ಕೋಣೆಗೆ ಕರೆದೊಯ್ದ ವೈದ್ಯರು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ.

Home add -Advt

ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ಮಹಿಳೆ ತನ್ನ ಮೇಲೆ ವೈದರು ಅತ್ಯಾಚಾರ ನಡೆಸಿದ್ದಾಗಿ ದೂರು ನೀಡಿದ್ದಾರೆ. ಬಸ್ತಿಯಿಂದ ಲಖನೌಗೆ ಆಗಮಿಸಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು, ಪ್ರಕರಣ ಸಂಬಂಧ ಆರೋಪಿ ವೈದ್ಯರನ್ನು ಪೊಲಿಸರು ಬಂಧಿಸಿದ್ದಾರೆ.

ಭಾರಿ ಹಿಮಪಾತ; 20 ಜನರ ದುರ್ಮರಣ

https://pragati.taskdun.com/latest/himapatha20-people-deathuttarakhand/

Related Articles

Back to top button