
ಪ್ರಗತಿವಾಹಿನಿ ಸುದ್ದಿ: ಕೆರೆಯಲ್ಲಿ ಈಜಲು ಹೋಗಿ ತಂದೆ-ಮಗ-ಮಗನಸ್ನೇಹಿತ ಸೇರಿ ಮೂವರು ನೀರುಪಾಲಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಡ್ಡರಹಳ್ಳಿ ಬಳಿಯ ಬೂಡದಮಿಟ್ಟೆ ಕೆರೆಯಲ್ಲಿ ನಡೆದಿದೆ.
ವಾಟರ್ ಮ್ಯಾನ್ ರಮೇಶ್ (೪೦), ಮಗ ಅಗಸ್ತ್ಯ (೧೨) ಹಾಗೂ ಮಗನ ಸ್ನೇಹಿತ ಶರಣ್ (೧೫) ಮೃತರು. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.