ಪ್ರಗತಿವಾಹಿನಿ ಸುದ್ದಿ, ತೆಲಂಗಾಣ :
ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಬುಧವಾರ, ಪ್ರಯಾಣಿಸುತ್ತಿದ್ದ ಶಾಲಾ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ವೇಮುಲಾವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ವಾಗ್‌ದೇವಿ ಶಾಲೆಗೆ ಸೇರಿದ ಬಸ್ ವೇಣುಲಾವಾಡ ಬಸ್ ಡಿಪೋ ದಾಟುತ್ತಿದ್ದಾಗ ಚಾಲಕನು ನಿರ್ಲಕ್ಷ್ಯದಿಂದ ಬಸ್ ತಿರುವು ಪಡೆದಿದ್ದು ನಿಯಂತ್ರಣ ತಪ್ಪಿ ವಾಹನ ಉರುಳಿಬಿದ್ದಿದೆ. ಪೊಲೀಸರು ಚಾಲಕನ ವಿರುದ್ಧ ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಗೂ ಘಟನೆಯ ವೇಳೆ ಚಾಲಕನು ಮಧ್ಯ ಸೇವಿಸಿದ್ದಾನೆಯೇ ಎಂದು ತನಿಖೆ ನಡೆಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಮತ್ತು ಸರ್ಕಾರ, ಮೃತ ಕುಟುಂಬಗಳಿಗೆ ಸಹಾಯ ನೀಡಲಿದೆ ಎಂದು ಆರೋಗ್ಯ ಸಚಿವ ಎಟೆಲಾ ರಾಜೇಂದರ್ ತಿಳಿಸಿದ್ದಾರೆ. ಹಾಗೂ ನಡೆದಿರುವ ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಾರೆ. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ