Karnataka News

*ಶಾಲೆಗೆ ಹೋಗಿದ್ದ ಮೂವರು ವಿದ್ಯಾರ್ಥಿಗಳು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಶಾಲೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಮೂವರು ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿಯಲ್ಲಿ ನಡೆದಿದೆ.

ಧರ್ಮಪ್ರಕಾಶ್, ಮನು ಹಾಗೂ ಮಹೇಂದ್ರ ಎಂಬುವವರ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. 16 ವರ್ಷದ ಶರತ್, ಧನಂಜಯ್ ಹಾಗೂ ಮುರಳಿ ನಾಪತ್ತೆಯಾಗಿರುವ ವಿದ್ಯಾರ್ಥಿಗಳು.

ಮೂವರು ಮಕ್ಕಳು ಅದರವಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು. ಬುಧಾವರ ಬೆಳಿಗ್ಗೆ ಶಾಲೆಗೆ ಹೋಗುತ್ತೇನೆ ಎಂದು ಹೋದವರು ಅತ್ತ ಶಾಲೆಗೂ ಹೋಗಿಲ್ಲ. ಮನೆಗೂ ವಾಪಾಸ್ ಆಗಿಲ್ಲ. ನಾಪತ್ತೆಯಗೈರುವ ವಿದ್ಯಾರ್ಥಿ ಶರತ್ ಬಳಿ ಮೊಬೈಲ್ ಇದೆ. ಕರೆ ಮಾಡಿದರೆ ಸ್ವಿಚ್ಡ್ ಆಫ್ ಆಗಿದೆ. ಕಂಗಾಲಾಗಿರುವ ಪೋಷಕರು ಮಕ್ಕಳನ್ನು ಹುಡುಕಿಕೊಡಿ ಎಂದು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button