Latest

ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ

ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –4ನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ 6.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಅವರು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನೆಕ್ಕೆ ಅನುಮತಿ ನೀಡುವಂತೆ ಕೋರಿದ್ದರು. ಆದರೆ ರಾಜ್ಯಪಾಲರು ಸಂಜೆ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದರು.

ಯಡಿಯೂರಪ್ಪ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೋ… ಜೊತೆಗೆ ಇನ್ಯಾರಾದರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೋ ಸ್ಪಷ್ಟವಾಗಿಲ್ಲ.ಇಂದು ನಡೆದ ದಿಢೀರ್ ಬೆಳವಣಿಗೆಯಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಲು ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಅನುಮತಿ ನೀಡಿದೆ.

ಗೊಂದಲಕ್ಕೆ ತೆರೆ

ಈ ಬೆಳವಣಿಗೆಯಿಂದಾಗಿ ರಾಜ್ಯದಲ್ಲಿ ಕಳೆದ 20 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಗೊಂದಲ ಮತ್ತೊಂದು ಹಂತಕ್ಕೆ ತಲುಪಿದಂತಾಗಿದೆ.ವಿಧಾನಸಭೆಯಲ್ಲಿ ಮೈತ್ರಿ ಸರಕಾರ ವಿಶ್ವಾಸಮತ ಗೋಲ್ಲುವಲ್ಲಿ ವಿಪಲವಾದ ಮರುದಿನವೇ ಯಡಿಯೂರಪ್ಪ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಹೈಕಮಾಂಡ್ ನಿಂದ ಹಸಿರು ನಿಶಾನೆ ಸಿಕ್ಕಿರಲಿಲ್ಲ.

ನಿನ್ನೆಯಷ್ಟೆ ಸ್ಪೀಕರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದರು. ಇದು ಬಿಜೆಪಿಗೆ ಇನ್ನಷ್ಟು ಆತಂಕ ತಂದಿತ್ತು.ಆದರೆ ಇಂದು ಬೆಳಗ್ಗೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಸರಕಾರ ರಚನೆಗೆ ಹಕ್ಕು ಮಂಡಿಸಲು ಅನುಮತಿ ನೀಡಿತು. ಹಾಗಾಗಿ ಯಡಿಯೂರಪ್ಪ 10 ಗಂಟೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಬಳಿ ಸರಕಾರ ರಚನೆಗೆ ಹಕ್ಕು ಮಂಡಿಸಿದರು.ರಾಜ್ಯಪಾಲರು ಸಂಜೆ 6.15ಕ್ಕೆ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ನೀಡಿದರು.

Home add -Advt

ಮರಳಿದ ಶಾಸಕರು

ಕಳೆದ ಹಲವು ದಿನಗಳಿಂದ ಬಿಜೆಪಿ ಶಾಸಕರೆಲ್ಲ ಬೆಂಗಳೂರಿನಲ್ಲೇ ಬಿಡು ಬಿಟ್ಟಿದ್ದರು. ಆದರೆ ಸರಕಾರ ರಚನೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆಲ್ಲ ಮರಳಿ ಕ್ಷೇತ್ರಕ್ಕೆ ತೆರಳಲು ಇಂದು ಬೆಳಗ್ಗೆಯಷ್ಟೆ ಸೂಚನೆ ನೀಡಲಾಗಿತ್ತು.ಬಹುತೇಕ ಶಾಸಕರು ಮನೆಗೆ ತೆರಳಿದ್ದರು. ದೂರದ ಊರಿನ ಶಾಸಕರು ವಿಮಾನವೇರಲು ವಿಮಾನ ನಿಲ್ದಾಣಕ್ಕೆ ತೆರಳಿದ್ದರು.

ಅಷ್ಟರಲ್ಲಿ ವಾಪಸ್ ಬರುವಂತೆ ಮತ್ತೆ ಸೂಚನೆ ಬಂದಿದೆ. ಹಾಗಾಗಿ ಶಾಸಕರೆಲ್ಲ ವಾಪಸ್ ಯಡಿಯೂರಪ್ಪ ನಿವಾಸಕ್ಕೆ ಬಂದರು.ಇದೀಗ ಬಿಜೆಪಿಯಲ್ಲಿ ತೀವ್ರ ರಾಜಕೀಯ ಚಟುವಟಿಕೆ ನಡೆಯುತ್ತಿದ್ದ, ಇಂದು ಯಡಿಯೂರಪ್ಪ ಒಬ್ಬರೇ ಪ್ರಮಾಣ ವಚನೆ ಸ್ವೀಕರಿಸಬೇಕೋ, ಜೊತೆಗೆ ಇನ್ನೂ ಯಾರಾದರೂ ಸ್ವೀಕರಿಸಬೇಕೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಯಡಿಯೂರಪ್ಪ ಈಗಾಗಲೆ ಪ್ರಕಟಿಸಿದ್ದಾರೆ.ಇನ್ನು ಕೆಲವೇ ಹೊತ್ತಿನಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಬಹುದು.

ಹೈಕಮಾಂಡ್ ಸೂಚನೆ

ಈ ಮಧ್ಯೆ ಸಚಿವರಾಗಲು ಯಾರೂ ಒತ್ತಡ ಹೇರದಂತೆ ಮತ್ತು ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಎಲ್ಲ ಶಾಸಕರಿಗೂ ಸೂಚನೆ ನೀಡಿದೆ. ಹಾಗಾಗಿ ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ.ಕಾಂಗ್ರೆಸ್ ಅತೃಪ್ತರಿಗೂ ಮಂತ್ರಿಸ್ಥಾನ ಕೊಡಬೇಕಾದ ಅನಿವಾರ್ಯತೆ ಇರುವುದರಿಂದ ಬಿಜೆಪಿಯ ಹಲವು ಶಾಸಕರು ತ್ಯಾಗಮಾಡಲೇಬೇಕಾದ ಅನಿವಾರ್ಯತೆ ಇದೆ.

ಈ ಬಗ್ಗೆ ಯಡಿಯೂರಪ್ಪ ಈಗಾಗಲೆ ಶಾಸಕರಿಗೆ ಸೂಚ್ಯವಾಗಿ ತಿಳಿಸಿದ್ದಾರೆ.ಬಿಜೆಪಿ ಹೈಕಮಾಂಡ್ ಹೆಚ್ಚು ಪ್ರಬಲವಾಗಿರುವುದರಿಂದ ಶಾಸಕರು ಭಿನ್ನಮತ ತೋರ್ಪಡಿಸುವ ಸಾಧ್ಯತೆ ಕಡಿಮೆ. ಆದರೆ ಹಲವರು ಬೇರೆ ಪಕ್ಷಗಳಿಂದ ಬಂದವರೂ ಇರುವುದಿರಿಂದ ಪಕ್ಷ ತೀರಾ ಹಗುರವಾಗಿ ಪರಿಗಣಿಸಲಂತೂ ಸಾಧ್ಯವಿಲ್ಲ.

ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಿರಂತರವಾಗಿ ಬಿಜೆಪಿ ಕಾಲೆಳೆಯಲು ಪ್ರಯತ್ನ ನಡೆಸುವುದು ನಿಶ್ಚಿತವಾಗಿರುವುದರಿಂದ ಬಿಜೆಪಿ ಸರಕಾರದ್ದು ಹಗ್ಗದ ಮೇಲಿನ ನಡಿಗೆಯಾಗಲಿದೆ.ಇದರ ಜೊತೆಗೆ, ಇನ್ನುಳಿದ ಅತೃಪ್ತ ಶಾಸಕರ ಕುರಿತು ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರವೂ ಕುತೂಹಲ ಮೂಡಿಸಿದೆ. ಹಾಗಾಗಿ ರಾಜಕೀಯ ಅಸ್ಥಿರತೆ ಇನ್ನೂ ಕೆಲವು ದಿನ ಮುಂದುವರಿಯಬಹುದು.

 

ಇದನ್ನೂ ಓದಿ –ಇಂದೇ ಯಡಿಯೂರಪ್ಪ ಪ್ರಮಾಣವಚನ

ರಾಜಭವನಕ್ಕೆ ತೆರಳಿದ ಯಡಿಯೂರಪ್ಪ; ಶಾಸಕರೆಲ್ಲ ಏರ್ ಪೋರ್ಟ್ ನಿಂದ ವಾಪಸ್

Related Articles

Back to top button