ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಆಟವಾಡುತ್ತ ಬಾವಿಗೆ ಬಿದ್ದಿದ್ದ ಮಗುವನ್ನು ರಕ್ಷಣೆ ಮಾಡಲು ಹೋಗಿದ್ದ 30ಕ್ಕೂ ಹೆಚ್ಚು ಜನರು ಮಣ್ಣು ಕುಸಿದು ಬಾವಿಗೆ ಬಿದ್ದ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.
8 ವರ್ಷದ ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಕಾಲು ಜಾರಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಳು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚಣೆ ಕೈಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನೋಡಲು ನೂರಾರು ಮಂದಿ ನೆರೆದಿದ್ದಾರೆ. ಈ ವೇಳೆ ಭಾರಿ ಮಳೆಯಿಂದಾಗಿ ಬಾವಿ ಪಕ್ಕದಲ್ಲಿದ್ದ ಮಣ್ಣು ಹಾಗೂ ತಡೆಗೋಡೆ ಕುಸಿದು 30ಕ್ಕೂ ಹೆಚ್ಚು ಜನರು ಬಾಯಿಯಲ್ಲಿ ಬಿದ್ದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 23 ಜನರನ್ನು ರಕ್ಷಿಸಲಾಗಿದ್ದು, ಗಾಯಗೊಂಡಿರುವ 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿ ರಕ್ಷಣಾ ಕಾರ್ಯಾಚಾರಣೆ ಮುಂದುವರೆದಿದೆ. 50 ಅಡಿ ಬಾವಿಯಾಗಿದ್ದು, ಮಳೆಯಿಂದಾಗಿ ಸುಮಾರು 20 ಅಡಿವರೆಗೆ ನೀರು ತುಂಬಿಕೊಂಡಿದೆ ಎನ್ನಲಾಗಿದೆ.
ಇಂದು ದೆಹಲಿಗೆ ಹೋಗಲಿರುವ ಬಿಎಸ್ ವೈ: 3 ಪ್ರಮುಖ ಕಾರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ