ಸಿಸಿಬಿ ಪೊಲೀಸರ ಕಾರ್ಯಾಚರಣೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಪೊಲೀಸರು ಸಮರ ಮುಂದುವರೆಸಿದ್ದು, ಬರೋಬ್ಬರಿ 34 ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.
ವಿದೇಶಿ ಪ್ರಜೆ ಸೇರಿದಂತೆ 34 ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 2 ಕೋಟಿ 42 ಲಕ್ಷಕ್ಕೂ ಹೆಚ್ಚು ಮೌಲ್ಯದ ಡ್ರಗ್ ಜಪ್ತಿ ಮಾಡಲಾಗಿದೆ.
24 ಪ್ರಕರಣಗಳಲ್ಲಿ 34 ಆರೋಪಿಗಳನ್ನು ಬಂಧಿಸಲಾಗಿದ್ದು, ಕೇರಳ ಮೂಲದ 15, ರಾಜ್ಯದ 10, ಬಿಹಾರದ ನಾಲ್ವರು, ಓಡಿಶಾದ ಇಬ್ಬರು, ಅಸ್ಸಾಂ, ಹರಿಯಾಣದ ತಲಾ ಇಬ್ಬರು ಹಾಗೂ ನೈಜಿರಿಯಾದ ಓರ್ವನನ್ನು ಬಂಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ