Latest

ಮೂರೇ ಮುಳುವಾಯಿತು 35ರ ಮಹಿಳೆಗೆ; ಮೃತ್ಯುವಾಗಿ ಬಂದ ಮೂರನೇ ಪತಿ

ಪ್ರಗತಿವಾಹಿನಿ ಸುದ್ದಿ, ಲಕ್ನೋ:  ಮೂರು ಬಾರಿ ಮದುವೆಯಾದ ಮಹಿಳೆ ಪಾಲಿಗೆ ಮೂರನೇ ಪತಿ ಮೃತ್ಯುವಾಗಿದ್ದಾನೆ!

ಘಾಜಿಯಾಬಾದ್ ನ ಮಹಿಳೆ ಭವ್ಯ ಶರ್ಮಾ@ಅಂಜಲಿ@ರಜಿಯಾ@ಭವ್ಯ(35) ಕೊಲೆಯಾದ ಮಹಿಳೆ.

ಮೂರನೇ ಬಾರಿ ಮದುವೆಯಾದ ಮೇಲೂ ಎರಡನೇ ಪತಿಯೊಂದಿಗೆ ಸಂಬಂಧ ಹೊಂದಿದ ಕಾರಣಕ್ಕೆ ಮುನಿದ ಮೂರನೇ ಪತಿ ಅವರ ಕೊಲೆಗೈದು ಜೈಲು ಸೇರಿದ್ದಾನೆ.

ಭವ್ಯ ಶರ್ಮಾ ಮೂಲತಃ ಬಿಹಾರದ ಸೀತಾಮರ್ಹಿಯವರು. 2004ರಲ್ಲಿ ದೆಹಲಿ ಮೂಲದ ಮಹೇಂದ್ರಕುಮಾರ್ ಎಂಬುವವರೊಂದಿಗೆ ವಿವಾಹವಾಗಿದ್ದರು. ಆಗ ತಮ್ಮ ಹೆಸರನ್ನು ‘ಅಂಜಲಿ’ ಎಂದು ಬದಲಾಯಿಸಿಕೊಂಡಿದ್ದರು. ಆಗ ಮಹೇಂದ್ರಕುಮಾರ್ ಅವರಿಂದ ಗಂಡುಮಗು ಪಡೆದಿದ್ದರು.

Home add -Advt

2017ರಲ್ಲಿ ಅನೀಸ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿ ಮತಾಂತರಗೊಂಡು ‘ಅಫ್ಸಾನಾ’ ಆದರು. ಅನೀಸರ್ ರಿಂದ ಒಬ್ಬ ಗಂಡುಮಗು ಪಡೆದಿದ್ದರು.

ಮೂರನೇ ಬಾರಿ ಗುರುಗ್ರಾಮದ ವಿನೋದ್ ಶರ್ಮಾ ಅವರನ್ನು ಮದುವೆಯಾಗಿ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಭವ್ಯ ಮತ್ತು ವಿನೋದ್ ಜೊತೆ ಎರಡನೇ ಪತಿಯಿಂದ ಪಡೆದ ಮಗ ಆದಿಲ್ ಕೂಡ ಇದ್ದ. ಆದರೆ ತಮ್ಮ ಎರಡನೇ ಪತಿ ಜೊತೆಗಿನ ಸಂಬಂಧ ಮಾತ್ರ ಹಾಗೆಯೇ ಮುಂದುವರಿಸಿದ್ದರು ಎನ್ನಲಾಗಿದೆ.

ಇದರಿಂದ ಕೋಪಗೊಂಡ ಮೂರನೇ ಪತಿ ಚಾಕುವಿನಿಂದ ಇರಿದು ಪತ್ನಿಯ ಕೊಲೆಗೈದಿದ್ದಾನೆ. ಡಿ.26ರಂದು ಹಾಸಿಗೆಯಲ್ಲೇ ಅವರ ಶವ ಪತ್ತೆಯಾಗಿದ್ದು ಹೊಟ್ಟೆಗೆ ಇರಿತದ ಗಾಯಗಳಿದ್ದವು. ಎರಡನೇ ಪತಿ ಅನೀಸ್ ಜೊತೆ ಆಕೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದಾಗ ತಾವು ಆತನ ಮನೆಯಲ್ಲಿದ್ದುದಾಗಿ ಆರೋಪಿ ಹೇಳಿಕೊಂಡಿದ್ದು, ಅನೀಸ್ ತನಗೆ ಜೀವಬೆದರಿಕೆಯೊಡ್ಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ.

ಮಗ ಆದಿಲ್ ನನ್ನು ಪೇಟೆಗೆ ಕಳುಹಿಸಿದ ಬಳಿಕ ಕೊಲೆಗೈದಿದ್ದಾಗಿ ಆರೋಪಿ ಪೊಲೀಸರೆದುರು ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ಮುಂದುವರಿದಿದೆ.

ಮೀಸಲಾತಿ ಪ್ರಕಟಿಸಿದ ರೀತಿಗೆ ಡಿ.ಕೆ.ಶಿವಕುಮಾರ್ ಕಿಡಿ ಕಿಡಿ

https://pragati.taskdun.com/d-k-sivakumar-lashed-out-at-the-manner-in-which-the-reservation-was-announced/

ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸಮಾವೇಶ

https://pragati.taskdun.com/hindu-intercast-married-couple-convention/

ಕ್ಯಾಲೆಂಡರ್ ಬದಲಾದರೆ ಸಾಲದು, ಕಾಯಕಗಳು ಬದಲಾಗಲಿ

https://pragati.taskdun.com/its-not-enough-if-the-calendar-changes-let-the-works-change/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button