ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವೈದ್ಯವಿಜ್ಞಾನದಲ್ಲಿ ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಲಿದೆ. ಅದಕ್ಕನುಗುಣವಾಗಿ ವೈದ್ಯಕೀಯ ಮಹಾವಿದ್ಯಾಲಯಗಳೂ ಕೂಡ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಅತ್ಯಾಧುನಿಕ ರೀತಿಯಲ್ಲಿ ಕಲಿಕೆಗೆ ಪೂರಕವಾಗುವ ಅವಕಾಶವನ್ನು ಕಲ್ಪಿಸಿಕೊಡಬೇಕು. ಕಲಿಕೆಯ ಹಂತದಲ್ಲಿಯೇ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಅಗತ್ಯತೆಗಳನ್ನು ಪೂರೈಸಿ, ಅವರೂ ಕೂಡ ನುರಿತ ತಜ್ಞವೈದ್ಯರಾಗಿ ಸೇವೆಗೆ ಅಣಿಯಾಗಿ ನಿಲ್ಲಬೇಕು. ಯುವ ವೈದ್ಯ ಸಮೂಹದ ಜವಾಬ್ದಾರಿ ಅದರಲ್ಲಿಯೂ ಹೆರಿಗೆ ಮತ್ತು ಸ್ತ್ರೀರೋಗ ವೈದ್ಯರಿಗೆ ಹೆಚ್ಚನ ಜವಾದ್ಬಾರಿ ಇದೆ ಎಂದು ಬೆಂಗಳೂರಿನ ಅಲ್ಟಿಸ್ ಆಸ್ಪತ್ರೆಯ ಡಾ. ಬಿ ರಮೇಶ ಅವರಿಂದಿಲ್ಲಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸ್ತ್ರೀರೋಗ ಮತ್ತು ಹೆರಿಗೆ ವಿಭಾಗವು ಏರ್ಪಡಿಸಿದ್ದ 3ಡಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಾ ನೇರ ಪ್ರಾತ್ಯಕ್ಷತೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅತ್ಯಂತ ಸುಲಭದಲ್ಲಿ ಮಾಹಿತಿ ಲಭಿಸುತ್ತಿದೆ. ಅದರಂತೆ ಅವುಗಳ ನೇರ ಬಳಕೆಯೂ ಕೂಡ ಮಾಖ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಅನೂಕೂಲ ಕಲ್ಪಿಸಲು ಸಹಕಾರಿ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಆಗಬೇಕು. ಮುಂದಿನ ಪೀಳಿಗೆ ಭವಿಷ್ಯದ ದೃಷ್ಠಿಯಿಂದ ಕಲಿತಾ ಹಂತದಲ್ಲಿಯೇ ತಂತ್ರಜ್ಞಾನದ ಒಳ್ಳೆಯ ವ್ಯವಸ್ಥೆ ಒಳಗೊಳ್ಳಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುಣೆಯ ಗ್ಯಾಲಕ್ಸಿ ಆಸ್ಪತ್ರೆಯ ಡಾ. ಶೈಲೇಶ್ ಪುಟಂಬೇಕರ ಅವರು ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ನೋಡಿ ಪಾಲಕರು ಪಡುವ ಖುಷಿಗಿಂತ ಬೇರೆ ಸಂತೋಷ ಮತ್ತೋಂದಿಲ್ಲ. ಸಂಸ್ಕಾರಯುತ ಜೀವನವೂ ಮುಖ್ಯ. ವೈದ್ಯಕೀಯ ಕಾಲೇಜಗಳು ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಯನ್ನು ಹೆಚ್ಚಾಗಿ ಪ್ರೇರೇಪಿಸಬೇಕು. 15 ವರ್ಷಗಳ ನಂತರ ಇದು ಹೆಚ್ಚಾಗಿ ಬಳಕೆಯಾಗುತ್ತಲಿದೆ. ಕಲಿಕೆ ಹಾಗೂ ತಿಳಿದುಕೊಳ್ಳುವದು ಅತೀ ಮುಖ್ಯ. ಯಾವುದೇ ಕ್ಲಿಷ್ಕಕರವಾದ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸರಳವಾಗಿ ಮಾಡುವ ಧೈರ್ಯ ವಿರಲಿ. ಕೇವಲ ನುರಿತ ತಜ್ಞರು ಅವುಗಳನ್ನು ಸಾಧಿಸಲು ಸಾಧ್ಯ. ನೀವೂ ಕೂಡ ನುರಿತವರಾಗಿರಬೇಕು. ಭಾಷೆ ಮುಖ್ಯವಲ್ಲ. ನೀವು ನೀಡುವ ಮಾಹಿತಿ ಮುಖ್ಯವಾಗಿರುತ್ತದೆ. ನಿಮ್ಮ ಕಲ್ಪನೆ ಹಾಗೂ ದಾರಿ ಸ್ಪಷ್ಟವಾಗಿರಲಿ. ಕೇವಲ ಪ್ರಮಾಣಪತ್ರ ಮುಖ್ಯವಲ್ಲ ನಿಮ್ಮಲ್ಲಿರುವ ಕೌಶಲ್ಯ ಹಾಗೂ ಸಮರ್ಪನಾ ಭಾವನೆ ಮುಖ್ಯ. ಕಠಿಣ ಪರಿಶ್ರಮದ ಮೂಲಕ 2007ರಲ್ಲಿ ಪ್ರಾಥಮ ಬಾರಿಗೆ ಗರ್ಭಾಷಯ ಕಸಿ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಚಿಕ್ಕ ರಂದ್ರದ ಮೂಲಕ ನಡೆಸುವ ಶಸ್ತ್ರಚಿಕಿತ್ಸೆ ಅತ್ಯಂತ ಪರಿಣಾಮಕಾರಿ. ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಶಸ್ತ್ರಚಿಕಿತ್ಸೆ ಲ್ಯಾಪ್ರೋಸ್ಕೋಪಿಕ ಮೂಲಕ ವ್ಯವಸ್ಥೆ. 7 ಹೃದಯ ಯಶಸ್ವಿ ಕಸಿ. ಈಗ ಎಲ್ಲ ರೀತಿಯ ಅಂಗಾಂಗ ಕಸಿ. ಎರಡು ದಶಕಗಳಲ್ಲಿ ಅನೇಕ ವೈದ್ಯಕೀಯ ಸೇವೆಗಳನ್ನು ಒಳಗೊಂಡಿದೆ. ಕ್ಯಾನ್ಸರ್ ಅಸ್ಪತ್ರೆ ಸೇವೆಗೆ ಸಿದ್ದವಾಗಿದೆ. ಜನರಿಗೆ ಅತ್ಯಂತ ಸುರಕ್ಷಿತ ಚಿಕ್ಕ ರಂದ್ರದ ಮೂಲಕ ನಡೆಸುವ ಶಸ್ತ್ರಚಿಕಿತ್ಸೆಯನ್ನು ಎರಡು ದಶಕಗಳಿಂದ ನಮ್ಮಲಿ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚರ‍್ಯರಾದ ಡಾ. ವಿಶ್ವನಾಥ ಪಟ್ಟಣಶೆಟ್ಟಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಶೈಲೇಶ ಪ್ಮಟಂಬೇಕರ, ಡಾ. ಬಿ ರಮೇಶ, ಡಾ. ಜಯಪ್ರಕಾಶ ಪಾಟೀಲ, ಕೋಝಿಕೋಡನ ಡಾ. ಸುಭಾಷ ಮಲ್ಲಯ್ಯ, ಡಾ. ವಿಜಯಕುಮಾರ ಕೊರವಿ ಅವರನ್ನು ಸತ್ಕರಿಸಲಾಯಿತು. ಕಾರ್ಯಾಗಾರದಲ್ಲಿ ಡಾ. ಎಂ ಬಿ ಬೆಲ್ಲದ, ಡಾ. ಅನಿತಾ ದಲಾಲ, ಡಾ. ಎಂ ಸಿ ಮೆಟಗುಡ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
86ನೇ ಕನ್ನಡ ಸಾಹಿತ್ಯ ಸಮ್ಮೇಳನ; ಗೋಷ್ಠಿಗಳ ವಿಷಯ ರಚನೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯ ಮೊದಲ ಸಭೆ
https://pragati.taskdun.com/latest/haverikannada-sahiya-sammelanameetingdr-nadoja-mahesh-joshi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ