ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -೩ನೇ ರೇಲ್ವೇ ಗೇಟ್ ಹತ್ತಿರ ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಿ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಕೆಲಸ ಮುಕ್ತಾಯಗೊಳ್ಳುವವರೆಗೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ/ನಿಷೇಧ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು ಕೋರಲಾಗಿದೆ.
೧) ಖಾನಾಪುರ, ಪೀರನವಾಡಿ, ಬೆಮ್ಕೋ ಕಡೆಯಿಂದ ಬೆಳಗಾವಿ ನಗರ ಪ್ರವೇಶ ಮಾಡುವ ಭಾರಿ ವಾಹನಗಳನ್ನು ೩ನೇ ರೇಲ್ವೇ ಗೇಟ್ ದಿಂದ ಆರ್‌ಪಿಡಿ ರಸ್ತೆ ಮೂಲಕ ಪಿಬಿ ರೋಡ್ ಸೇರುವ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ.
೨) ಖಾನಾಪುರ, ಪೀರನವಾಡಿ, ಬೆಮ್ಕೋ ಕಡೆಯಿಂದ ಬೆಳಗಾವಿ ನಗರ ಪ್ರವೇಶ ಮಾಡುವ ಭಾರಿ ವಾಹನಗಳನ್ನು ಕಾಂಗ್ರೇಸ್ ರೋಡ್ ಮಾರ್ಗವಾಗಿ ಮುಂದೆ ಸಾಗುವುದು.
೩) ಖಾನಾಪುರ, ಪೀರನವಾಡಿ, ಕಡೆಯಿಂದ ಬೆಳಗಾವಿ ನಗರ ಅನಗೋಳ ಪ್ರದೇಶಕ್ಕೆ ಸಂಚಾರಿಸುವ ಲಘು ವಾಹನಗಳನ್ನು ಬೆಮ್ಕೋ ಕ್ರಾಸ್‌ದಲ್ಲಿ ಬಲ ತಿರುವ ಪಡೆದುಕೊಂಡು ೪ನೇ ರೇಲ್ವೆ ಗೇಟ್ ಮಾರ್ಗವಾಗಿ ಸಂಚಾರಿಸುವದು.
೪) ಖಾನಾಪುರ, ಪೀರನವಾಡಿ ಬೆಮ್ಕೋ ಕಡೆಯಿಂದ ಬೆಳಗಾವಿ ನಗರದ ಆರ್‌ಪಿಡಿ, ಅನಗೋಳ, ಟಿಳಕವಾಡಿ, ವಡಗಾಂವ, ಶಾಹಾಪೂರ, ಹಳೆ ಬೆಳಗಾವಿ, ಧಾಮಣೆ, ಯಳ್ಳೂರ, ಸುಳಗಾ, ಕಡೆಗೆ ಸಂಚರಿಸುವ ಲಘು ವಾಹನಗಳು ದ್ವಿಚಕ್ರ ವಾಹನಗಳು ಕಾಂಗ್ರೇಸ್ ರಸ್ತೆಯ ಮೂಲಕ ೨ನೇ ರೇಲ್ವೆ ಗೇಟ್ ದಲ್ಲಿ ಬಲ ತಿರುವ ಪಡೆದುಕೊಂಡು ಸಾಗುವುದು.
೫) ಆರ್‌ಸಿ ನಗರ, ಚೌಗಲೆವಾಡಿ, ಗುರುಪ್ರಸಾದ ನಗರ ಕಡೆಯಿಂದ ಆರ್‌ಪಿ.ಡಿ., ಅನಗೋಳ, ಟಿಳಕವಾಡಿ, ವಡಗಾಂವ, ಶಹಾಪೂರ ಹಳೆ ಬೆಳಗಾವಿ, ಧಾಮಣೆ, ಯಳ್ಳೂರ ಸುಳಗಾ ಕಡೆಗೆ ಸಂಚಾರಿಸುವ ಲಘು ವಾಹನಗಳು & ದ್ವಿಚಕ್ರ ವಾಹನಗಳು ಕಾಂಗ್ರೇಸ್ ರಸ್ತೆಯ ಮೂಲಕ ೨ನೇ ರೇಲ್ವೆ ಗೇಟ ಮಾರ್ಗವಾಗಿ ಸಾಗುವುದು. (ಏಕಮುಖ ಸಂಚಾರ ವ್ಯವಸ್ಥೆ)
೬) ಅನಗೋಳ, ಶಹಾಪುರ, ವಡಗಾಂವ, ಹಿಂದವಾಡಿ, ಹಳೆ ಬೆಳಗಾವಿ ಕಡೆಯಿಂದ ೨ನೇ ರೇಲ್ವೆ ಗೇಟ್ ಮೂಲಕ ಸಂಚರಿಸುವ ಎಲ್ಲ ವಾಹನಗಳನ್ನು ನಿಷೇಧಿಸಲಾಗಿದೆ. (ಏಕಮುಖ ಸಂಚಾರ ವ್ಯವಸ್ಥೆ).
೭) ಅನಗೋಳ, ಶಹಾಪುರ, ವಡಗಾಂವ್, ಹಿಂದವಾಡಿ, ಹಳೆ ಬೆಳಗಾವಿ ಕಡೆಯಿಂದ ಆರ್.ಸಿ ನಗರ ಗುರಪ್ರಸಾದ ಕಾಲನಿ ಕಡೆಗೆ ಸಂಚರಿಸುವ ವಾಹನಗಳು ಗೋವಾವೇಸ್ ಸರ್ಕಲ್ ಮಿಲೇನಿಯಮ್ ಗಾರ್ಡನ್ ರಸ್ತೆ ಹಾಗೂ ದೇಶಮುಖ್ ರಸ್ತೆ ಮೂಲಕ ಸಂಚರಿಸಿ ೧ನೇ ರೇಲ್ವೆ ಗೇಟ್ ದಿಂದ ಖಾನಾಪುರ ರಸ್ತೆ ಬಲ ತಿರುವು ಪಡೆದುಕೊಂಡು ಸಾಗುವುದು.
೮) ಬೆಳಗಾವಿ ನಗರ ಚನ್ನಮ್ಮಾ ಸರ್ಕಲ್ ಕಡೆಯಿಂದ ಖಾನಾಪುರ ಕಡೆಗೆ ಸಂಚಾರಿಸುವ ಎಲ್ಲ ಭಾರಿ ವಾಹನಗಳು ಕಾಂಗ್ರೇಸ್ ರಸ್ತೆಯ ಮೂಲಕ ಸಂಚರಿಸುವುದನ್ನು ನಿಷೇಧಿಸಿದ್ದು, ಗೋಗಟೆ ಸರ್ಕಲ್‌ದಿಂದ ರೇಲ್ವೆ ಓವರ್ ಬ್ರಿಡ್ಜ್ ಮೂಲಕ ಸಂಚಾರಿಸಿ ೩ನೇ ರೇಲ್ವೆ ಗೇಟ್ ಮುಖಾಂತರ ಖಾನಾಪುರ ರಸ್ತೆಗೆ ಸಾಗುವುದು. (ಏಕಮುಖ ಸಂಚಾರ ವ್ಯವಸ್ಥೆ)
೯) ಬೆಳಗಾವಿ ನಗರ ಚನ್ನಮ್ಮಾ ಸರ್ಕಲ್ ಕಡೆಯಿಂದಾ ಖಾನಾಪೂರ ಕಡೆಗೆ ಸಂಚಾರಿಸುವ ಲಘು ವಾಹನಗಳು, ದ್ವಿಚಕ್ರ ವಾಹನಗಳು ಗೋಗಟೆ ಸರ್ಕಲ್‌ದಿಂದ ರೇಲ್ವೆ ಓವರ್ ಬ್ರಿಡ್ಜ್ ಹಾಗೂ ಕಾಂಗ್ರೇಸ್ ರಸ್ತೆಯ ಮೂಲಕ ಸಾಗುವುದು.
೧೦) ಖಾನಾಪುರ ರಸ್ತೆ, ೩ನೇ ರೇಲ್ವೆ ಗೇಟ್ ದಿಂದ ಉತ್ಸವ ಹೋಟೆಲ್ ಕ್ರಾಸ್ ವರೆಗೆ ಖಾನಾಪುರ ಕಡೆಯಿಂದ ಬರುವ ವಾಹನಗಳು ಹಾಗೂ ಬೆಳಗಾವಿ ನಗರ ಕಡೆಯಿಂದ ಹೋಗುವ ವಾಹನಗಳು ಬಲ ಬಾಜು ರಸ್ತೆಯಲ್ಲಿ ಸಾಗುವುದು.
೧೧) ಖಾನಾಪುರ ರಸ್ತೆ, ೩ನೇ ರೇಲ್ವೆ ಗೇಟ್ ದಿಂದ ಬೆಮ್ಕೋ ಕ್ರಾಸ್ ವರೆಗೆ ಬಲ ಬಾಜು ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
೧೨) ಅನಗೋಳ ನಾಕಾದಿಂದ ೩ನೇ ರೇಲ್ವೆ ಗೇಟ್ ವರೆಗೆ ಬಲ ಬಾಜು ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಶೆಟ್ಟರ್ ಬರುತ್ತಿದ್ದಾರೆ ಉದ್ಯಮಬಾಗ್ ನೋಡಲು!
ಈ ಬಾರಿ ಸರಕಾರಕ್ಕೆ ಕಂಟಕ ಯಾವುದು? ಬೆಳಗಾವಿಯೋ? ಬಳ್ಳಾರಿಯೋ?
ಯಡಿಯೂರಪ್ಪ ಜಿಲ್ಲಾ ಪ್ರವಾಸ ಮತ್ತಿತರ ಪ್ರಮುಖ ಸುದ್ದಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ