ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
4 ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಬೆಳಗಾವಿಯಲ್ಲಿ ಶನಿವಾರ ಆರಂಭವಾಯಿತು.
ಕಳೆದ 9 ವರ್ಷಗಳಿಂದ ಶಾಸಕ ಅಭಯ ಪಾಟೀಲ ಬೆಳಗಾವಿ ಮತ್ತು ಗೋವಾದಲ್ಲಿ ಗಾಳಿಪಟ ಉತ್ಸವ ಆಯೋಜಿಸುತ್ತಿದ್ದು, ಗೋವಾದಲ್ಲಿ 17 ಹಾಗೂ 18 ರಂದು ಉತ್ಸವ ನಡೆದಿದೆ.
ಬೆಳಗಾವಿ ಗಾಳಿಪಟ ಉತ್ಸವದಲ್ಲಿ 22 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿ ಗಾಳಿಪಟ ಹಾರಿಸಲಿದ್ದಾರೆ. ಮಕ್ಕಳಿಗಾಗಿ ಒಂದು ದಿನ, ಯುವಕರಿಗಾಗಿ ಮತ್ತು ಮಹಿಳೆಯರಿಗಾಗಿ ಒಂದೊಂದು ದಿನ ವಿಶೇಷ ಗಾಳಿಪಟ ಉತ್ಸವ ನಡೆಸಲಾಗುತ್ತದೆ.
ಈ ಬಾರಿ ಕನಿಷ್ಟ 3 ಲಕ್ಷ ಜನರು ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಅಭಯ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮಾಲಿನಿ ನಗರದಲ್ಲಿ ಉತ್ಸವ ನಡೆಯುತ್ತಿದ್ದು ಸಂಸದ ಸುರೇಶ ಅಂಗಡಿ ಶನಿವಾರ ಬೆಳಗ್ಗೆ ಚಾಲನೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ