Kannada NewsKarnataka News

ಅರಬಾವಿ ಕ್ಷೇತ್ರದಲ್ಲಿ 4.5 ಲಕ್ಷ ನಗದು ವಶ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಸೂಕ್ತ ದಾಖಲಾತಿಗಳಲ್ಲದೇ ಸಾಗಿಸಲಾಗುತ್ತಿದ್ದ 4.5 ಲಕ್ಷ ರೂಪಾಯಿ ನಗದು ಹಣವನ್ನು ತಾಲೂಕಿನ ಹಳ್ಳೂರ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ ಎಂದು ಅರಭಾವಿ ಚುನಾವಣಾಧಿಕಾರಿ ಪ್ರಭಾವತಿ ಎಫ್  ತಿಳಿಸಿದ್ದಾರೆ.

ತಾಲೂಕಿನ ಹಳ್ಳೂರ ಗ್ರಾಮದ ವ್ಯಾಪ್ತಿಯಲ್ಲಿ ಇರುವ ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಸಮೀರವಾಡಿಯಿಂದ ಮೂಡಲಗಿ ಕಡೆಗೆ ಹೊರಟಿದ್ದ ಕಾರನಲ್ಲಿ 2.5ಲಕ್ಷ ರೂ, ಹಾಗೂ ಮತ್ತೊಂದು ಮಹಾಲಿಂಗಪೂರ ಕಡೆಯಿಂದ ಘಟಪ್ರಭಾ ಕಡೆಗೆ ಹೊರಟಿದ್ದ ಕಾರನ್ನು ಹಳ್ಳೂರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದಾಗ 2ಲಕ್ಷ ಹಣ ಪತ್ತೆಯಾಗಿದೆ.

ಒಟ್ಟು 4.5ಲಕ್ಷ ನಗದು ಪತ್ತೆಯಾಗಿದ್ದು, ಬ್ಯಾಂಕಿಗೆ ಹಾಗೂ ಕಬ್ಬಿನ ಗ್ಯಾಂಗ್ ಗೆ ಕೊಡುವ ಹಣ ಎಂದು ಹೇಳಿದ್ದಾರೆ. ಆದರೆ ಹಣಕ್ಕೆ ಸಂಬಂಧಿಸಿದಂತೆ ಸಮರ್ಪಕ ದಾಖಲೆಗಳನ್ನು ಅವರು ಒದಗಿಸಿರುವುದಿಲ್ಲ. ಇದಲ್ಲದೇ ಹಣ ಸಾಗಾಣಿಕೆಗೆ ಸಂಬಂಧಿಸಿದಂತೆ ಇರುವ ನಿಗದಿತ ಎಸ್.ಓ.ಪಿ.ಯನ್ನು ಕೂಡ ಪಾಲಿಸದಿರುವುದು ಕಂಡುಬಂದಿದೆ. ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ನಿಯಮಾವಳಿ ಪ್ರಕಾರ ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದಾಗಿ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಚೆಕ್ ಪೋಸ್ಟ್ ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡದ ಕೆಲಸಕ್ಕೆ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ಪ್ರಶಾಂತ ಚನಗೊಂಡ ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಎಸ್ ಎ ಬಬಲಿ, ಸಿಪಿಐ ಶ್ರೀಶೈಲ್ ಬ್ಯಾಕೋಡ, ಎಫ್.ಎಸ್. ಟಿ ತಂಡದ ಅಧಿಕಾರಿ ಬಿ ಕೆ ಅಳಗೋಡಿ, ಪೊಲೀಸ್ ಸಿಬ್ಬಂದಿ ಹಣಮಂತ ಪುಗಶೆಟ್ಟೆ, ಚೆಕ್ ಪೋಸ್ಟ್ ಸಿಬ್ಬಂದಿ ರಾಜು ಕುಂಬಾರ  ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

https://pragati.taskdun.com/liquor-seized-near-yaragatti/
ReplyForward

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button