
ಪ್ರಗತಿವಾಹಿನಿ ಸುದ್ದಿ; ದೊಡ್ಡಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ದಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿಯಲ್ಲಿ ನಡೆದಿದೆ.
ಕಾಲೆ ಸರೇರಾ (60), ಲಕ್ಷ್ಮೀ ಸರೇರಾ (50), ಉಷಾ ಸರೇರಾ (40), ಪೊಲ್ ಸರೇರಾ (16) ಮೃತರು. ನೇಪಾಳ ಮೂಲದ ಕುಟುಂಬ 8 ದಿನಗಳ ಹಿಂದೆ ಕೆಲಸವನ್ನು ಅರೆಸಿ ಡೊಡ್ದಬಳ್ಳಾಪುರಕ್ಕೆ ಬಂದು ನೆಲೆಸಿತ್ತು.
ರಾತ್ರಿ ಕೋಲಿಫಾರಂ ನಲ್ಲಿ ಮಲಗಿದ್ದವರು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಬೆಳಿಗ್ಗೆ ಸ್ಥಳೀಯರು ಕೋಳಿ ಫಾರಂ ಗೆ ಹೋದಾಗ ನಾಲ್ವರು ಮೃತಪಟ್ಟಿರುವುದು ತಿಳಿದುಬಂದಿದೆ.
ನಾಲ್ವರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.