Kannada NewsKarnataka News
ಮನೆಗೆ ನುಗ್ಗಿ ಗನ್ ತೋರಿಸಿ 40 ಲಕ್ಷ ರೂ ರಾಬರಿ

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ನಗರದಲ್ಲಿ ಮನೆಗೆ ನುಗ್ಗಿ ರಾಬರಿ ಮಾಡಲಾಗಿದ್ದು, ಗನ್ ತೋರಿಸಿ 40 ಲಕ್ಷ ರೂ ರಾಬರಿ ಮಾಡಲಾಗಿದೆ.
ಕೊಡಿಗೆಹಳ್ಳಿಯಲ್ಲಿ ಬುಧವಾರ ರಾತ್ರಿ ಕಾರಿನಲ್ಲಿ ಬಂದು ಎಂಟು ಗಂಟೆಗೆ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ರಾಬರಿ ಮಾಡಿದ್ದಾರೆ. ಘಟನೆಯ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ದೌಡಾಯಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಸುಮಾರು ನಲವತ್ತು ಲಕ್ಷ ಹಣ ಮನೆಯಲ್ಲಿ ಯಾಕೆ ಇಟ್ಟಿದ್ರು ಅನ್ನೊ ಅನುಮಾನ ಮೂಡಿದೆ. ಸದ್ಯ ಪೊಲೀಸರಿಂದ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನೆ ನಡೆದ ಅಕ್ಕ ಪಕ್ಕ ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡಲಾಗುತ್ತಿದೆ.




