Belagavi NewsBelgaum NewsKannada NewsKarnataka NewsNationalPolitics

*400 ಕೋಟಿ ದರೋಡೆ ಪ್ರಕರಣ: ಬೆಳಗಾವಿ ಎಸ್ ಪಿ ಹೇಳಿದ್ದೇನು..?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಗೋವಾ ಗಡಿಯಲ್ಲಿ 400ಕೋಟಿ ರಾಬರಿ ಪ್ರಕರಣದ ಕುರಿತು ಬೆಳಗಾವಿ ಎಸ್ ಪಿ ಕೆ.ರಾಮರಾಜನ್ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು, ಜ.6ರಂದು ನಾಸಿಕ್ ಜಿಲ್ಲಾ ವರಿಷ್ಠಾಧಿಕಾರಿಯಿಂದ ಚೋರ್ಲಾ ಘಾಟ್ ನಲ್ಲಿ ರಾಬರಿಯಾಗಿದೆ ಎಂದು ನಮಗೆ ಪತ್ರ ಬಂದಿದೆ.‌ ಹಳೆಯ 2 ಸಾವಿರ ಮುಖ ಬೆಲೆಯ ನಾಲ್ಕನೂರು ಕೋಟಿ ಆಗಿರಬಹುದು ಅಂತಾ ಪತ್ರದಲ್ಲಿ ಇತ್ತು.

ಈ ಪ್ರಕರಣದಲ್ಲಿ ಅಕ್ಟೋಬರ್ 22ರಂದು ವಿಶಾಲ್ ನಾಯ್ಡು ಎಂಬಾತ ನಾಸಿಕ್ ನಲ್ಲಿ ಸಂದೀಪ್ ಪಾಟೀಲ್ ಎಂಬಾತನ ಕಿಡ್ನಾಪ್ ಮಾಡಿ, ಅಕ್ಟೋಬರ್ 16ರಂದು ನಾಲ್ಕನೂರು ಕೋಟಿ ಅಪಹರಣ ಆಗಿದೆ. ಆ ಹಣ ಎಲ್ಲಿಗೆ ಹೋಗಿದೆ ಅಂತಾ ಪ್ರಶ್ನೆ ಮಾಡುತ್ತಾರೆ. ಈ ರಾಬರಿಯಾಗಿದ್ದು ಚೋರ್ಲಾ ಘಾಟ್ ನಲ್ಲಿ ಅಂತಾ ಪತ್ರದಲ್ಲಿ ಉಲ್ಲೇಖ ಇದೆ. 

ಈ ಕಾರಣಕ್ಕೆ ನಮ್ಮ ಖಾನಾಪುರದ ಸಬ್ ಇನ್ಸ್ಪೆಕ್ಟರ್ ಸೇರಿ ಒಂದು ತಂಡವನ್ನ ಕಳುಹಿಸಿದ್ದೇವೆ. ಎಸ್ಐಟಿ ತಂಡ ಕೂಡ ರಚನೆ ಆಗಿರುತ್ತೆ. ಸಂದೀಪ್ ಪಾಟೀಲ್ ಬಳಿ ನಮ್ಮವರು ಮಾತಾಡಿದ್ದಾರೆ. ಆತ ಹೇಳಿರುವ ಪ್ರಕಾರ ಕಿಡ್ನಾಪ್ ಮಾಡಿದವರು ನನಗೆ ಹಣ ದರೋಡೆ ಬಗ್ಗೆ ಹೇಳಿದ್ದಾರೆ ಎಂದು ಸಂದೀಪ್ ನಮ್ಮ ಪೊಲೀಸರ ಮುಂದೆ ಹೇಳಿದ್ದಾರೆ.

Home add -Advt

ಇಲ್ಲಿ ಘಟನೆ ಆಗಿರುವ ಕಾರಣ ಯಾರು ಬಂದು ದೂರು ಕೊಟ್ರೂ ನಾವು ತೆಗೆದುಕೊಳ್ಳುತ್ತೇವೆ. ನೋಡಿದವರು, ವಿಕ್ಟಿಮ್ ಆದವರು ಬಂದು ದೂರು ಕೊಟ್ರೇ ತೆಗೆದುಕೊಳ್ಳುತ್ತೇವೆ. ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದಾರೆ.‌ ನಾವು ಸಹಕಾರ ಕೋಡುತ್ತೇವೆ. ಚೋರ್ಲಾ ಘಾಟ್ ಮೂರು ರಾಜ್ಯಗಳಿಗೆ ಬರುತ್ತೆ. ಯಾವ ನೋಟು ಅಂತಾ ಗೊತ್ತಾಗಿಲ್ಲ. ಚೋರ್ಲಾ ಘಾಟ್ ನಲ್ಲಿ ಹೊಸದಾಗಿ ಸಿಸಿಟಿವಿ ಅಳವಡಿಕೆ ಮಾಡುತ್ತೇವೆ ಎಂದು ತಿಳಿಸಿದರು.‌

Related Articles

Back to top button