Latest

ಅಪರೂಪದ ಮದುವೆ ಆತ್ಮಹತ್ಯೆಯಲ್ಲಿ ಅಂತ್ಯ

ಪ್ರಗತಿವಾಹಿನಿ ಸುದ್ದಿ; ತುಮಕೂರು: ತುಮಕೂರಿನಲ್ಲಿ 2021ರ ಅಕ್ಟೋಬರ್ ನಲ್ಲಿ 45 ವರ್ಷದ ಶಂಕರ್ ಎಂಬುವವರು 25 ವರ್ಷದ ಯುವತಿಯನ್ನು ವಿವಾಹವಾಗಿದ್ದು ರಾಜ್ಯದಲ್ಲಿ ಭಾರಿ ಸುದ್ದಿಯಾಗಿತ್ತು. ಇದೊಂದು ಅಪರೂಪದ ಮದುವೆ ಎಂದೇ ಹೇಳಲಾಗಿತ್ತು. ಆದರೆ ಇದೀಗ ದಂಪತಿಯ ಬಾಳಿನಲ್ಲಿ ದುರಂತವೊಂದು ನಡೆದಿದೆ.

ಸಂತೆಮಾವತ್ತೂರು ಗ್ರಾಮದ ನಿವಾಸಿ 25 ವರ್ಷದ ಮೇಘನಾಳನ್ನು 45 ವರ್ಷದ ಶಂಕರಣ್ಣ ವಿವಾಹವಾಗಿದ್ದರು. ಆದರೆ ಇದೀಗ ಶಂಕರಣ್ಣ ಶವ ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದಲ್ಲಿನ ಹೊಲದಲ್ಲಿ ಮರಕ್ಕೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಹುಲಿಯೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ನಿ ಮೇಘನಾ ಆಕ್ರಂದನ ಮುಗಿಲುಮುಟ್ಟಿದೆ.

ಹೃದಯಾಘಾತ; SSLC ಪರೀಕ್ಷೆಗೆ ನೇಮಕಗೊಂಡಿದ್ದ ಶಿಕ್ಷಕ ಸಾವು

Home add -Advt

Related Articles

Back to top button