*45,804 ಪಡಿತರ ಚೀಟಿ ರದ್ದು: ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ್*
ಪ್ರಗತಿವಾಹಿನಿ ಸುದ್ದಿ: ಒಂದು ಲಕ್ಷಕಿಂತ ಹೆಚ್ಚು ಆದಾಯ ಹೊಂದಿದರವರು ಹಾಗೂ ಸರ್ಕಾರಿ ನೌಕರರ 45,804 ಪಡಿತರ ಚೀಟಿಗಳನ್ನು ಅನರ್ಹ ಮಾಡಿ, 1,88,75,946 ರೂಪಾಯಿ ದಂಡ ವಿಧಿಸಿ ಸರ್ಕಾರಕ್ಕೆ ಜಮಾ ಮಾಡಲಾಗಿದೆ ಎಂದು ಬೆಳಗಾವಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ್ ನಾಯ್ಕ ಅವರು ಮಾಹಿತಿ ನಿಡಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಹಾರ ಇಲಾಖೆಯ ಆದೇಶದಂತೆ 12,538 ಮೃತ ಹೊಂದಿದ ಸದಸ್ಯರ ಹೆಸರು ಪಡಿತರ ಚೀಟಿಯಿಂದ ತೆಗೆಯಲಾಗಿದೆ. ಕಳೆದ ನವೆಂಬರ್ ನಿಂದ ಏಪ್ರಿಲ್ ವರೆಗೆ ಅಂದರೆ ಆರು ತಿಂಗಳಗಳ ಕಾಲ ಪಡಿತರ ತೆಗೆದುಕೊಳ್ಳದೆ ಇದ್ದ 19 ಸಾವಿರ ಪಡಿತರ ಚೀಟಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದರು.
ಪಡಿತರ ಪಡೆಯುತ್ತಿದ್ದ ಸರ್ಕಾರಿ ನೌಕರರಿಗೆ ದಂಡ ವಿಧಿಸಲಾಗಿದೆ. ಸರ್ಕಾರಿ ನೌಕರರು ಕೆಲಸಕ್ಕೆ ಸೇರಿದ ದಿನದಿಂದ, ಇಲ್ಲಿಯ ವರೆಗೆ ಎಲ್ಲಾ ಲೆಕ್ಕಾಚಾರ ಮಾಡಿ ದಂಡ ವಿಧಿಸಲಾಗಿದೆ. ಈಗಾಗಲೇ ಎಲ್ಲಾ ಇಲಾಖೆಯ ಸರ್ಕಾರಿ ನೌಕರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಂದ ಕೇಳಿದ್ದೇವೆ. ಆಧಾರ ನಂಬರ್ ಮೂಲಕ ಅವರು ಹೆಸರು ಪಡಿತರ ಚೀಟಿಯಲ್ಲಿ ಇದ್ದರೆ ಪತ್ತೆ ಹಚ್ಚುತ್ತೇವೆ ಎಂದು ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ