Latest

ಅಶ್ಲೀಲ ಚಿತ್ರ ನಿರ್ಮಾಣ ಕೇಸ್; ರಾಜ್ ಕುಂದ್ರಾಗೆ ಮತ್ತೆ ಸಂಕಷ್ಟ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದ ಪ್ರಮುಖ ಆರೋಪಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲಿಸಿಕೊಂಡಿದೆ.

ಅಶ್ಲೀಲ ಚಿತ್ರ ನಿರ್ಮಾಣ ಕೇಸ್ ನಲ್ಲಿ ರಾಜ್ ಕುಂದಾ ಅವರನ್ನು 2021ರಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಅಕ್ರಮವಾಗಿ ಹಣ ವಹಿವಾಟಿ ನಡೆಸಿರುವ ಆರೋಪ ಹಿನ್ನೆಲೆಯಲ್ಲಿ ಇದೀಗ ಇಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಿದೆ.

ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಜ್ ಕುಂದ್ರಾಗೆ ಇದೀಗ ಇಡಿ ತನಿಖೆ ಆರಂಭಿಸಲಿದ್ದು, ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಪತ್ನಿಗೆ ಕಿರುಕುಳ; ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಸಹೋದರನ ವಿರುದ್ಧ ಎಫ್ ಐ ಆರ್ ದಾಖಲು

Related Articles

Back to top button