Latest

5 ಗಂಟೆವರೆಗೆ ಶೇ.60ರಷ್ಟು ಮತದಾನ: ಇಲ್ಲಿದೆ ನಿರಂತರ ಅಪ್ ಡೇಟ್…..

ಲೋಕಸಭಾ ಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಶೇ.60.42 ರಷ್ಟು ಮತದಾನವಾಗಿದೆ.
ಶಾಸಕಿ ಅಂಜಲಿ ನಿಂಬಾಳಕರ್ ಖಾನಾಪುರದಲ್ಲಿ ಮತ ಚಲಾಯಿಸಿದರು.
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಪತ್ನಿ ಆಶಾ ಕೋರೆ ಜೊತೆ ಅಂಕಲಿಯಲ್ಲಿ ಮತ ಚಲಾಯಿಸಿದರು.
ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಚಿಕ್ಕೋಡಿಯಲ್ಲಿ ಕುಟುಂಬಸಮೇತ ಮತಚಲಾಯಿಸಿದರು.
ಕಲ್ಲೋಳಿಯಲ್ಲಿ ಜಿಲ್ಲ ಪಂಚಾಯಿತಿ ಮಾಜಿ ಅಧ್ಯಕ್ಷ ಈರಪ್ಪ ಕಡಾಡಿ ಕುಟುಂಬ ಸಮೇತ ಮತದಾನ ಮಾಡಿದರು.

ಚನ್ನಮ್ಮ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಲೋಕಸಭಾ ಚುನಾವಣೆಯಲ್ಲಿ ಮಧ್ಯಾಹ್ನದ ಬಿಸಿಲು ಎನ್ನದೇ ಭಾಗವಹಿಸಿದ ವಿಕಲಚೇತನ ಶಿವಾನಂದ ಮುದಕಪ್ಪ ನರೇಂದ್ರ(ಅಂಗಡಿ) ಮತದಾನ ಮಾಡಿದ ನಂತರ ತನ್ಮ ಬೆರಳಿಗೆ ಹಾಕಿದ ಶಾಯಿಯನ್ನು ತೋರಿಸುತ್ತಿರುವುದು ಹಾಗೂ ಗ್ರಾಮಸ್ಥರಾದ ಕಲ್ಮೇಶ ಸರಶೆಟ್ಟಿ, ಶಿವಾನಂದ ಕೆಳಗಿನಮನಿ, ಮಂಜುನಾಥ ಹುರಕಡ್ಲಿ , ನಾಗರಾಜ ದಾಸನಕೊಪ್ಪ, ತೀರ್ಥಗೌಡ ಪಾಟೀಲ ಇದ್ದರು.

ಶ್ರೀಶೈಲ ಜಗದ್ಗುರುಗಳಾದ ಶ್ರೀ ಡಾ ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಚಿಕ್ಕೋಡಿ ತಾಲೂಕಿನ ಯಡೂರಿನ ಮತಗಟ್ಟೆ ಸಂ. ೪೬ ರಲ್ಲಿ ಮತ ಚಲಾಯಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಸಹೋದರ ಚನ್ನರಾಜ ಹಟ್ಟಿಹೊಳಿ ಮೊದಲಾದವರು ಮತ ಚಲಾಯಿಸಿದರು.

ತೋಪಿನಕಟ್ಟಿ ಗ್ರಾಮದ ಮತಗಟ್ಟೆಯಲ್ಲಿ ವಿಕಲಚೇತನ ಯುವತಿ ಗಾಲಿ ಕುರ್ಚಿಯಲ್ಲಿ ಆಗಮಿಸಿ ಮತದಾನ ಮಾಡಿದರು.
ತೋಪಿನಕಟ್ಟಿ ಗ್ರಾಮದಲ್ಲಿರುವ ಮತಗಟ್ಟೆಯಲ್ಲಿ ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ್, ಗ್ರಾಪಂ ಅಧ್ಯಕ್ಷ ನಾರಾಯಣ ಗುರವ ಮತ್ತು ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರೂಪ್ ಪ್ರಧಾನ ವ್ಯವಸ್ಥಾಪಕ ತುಕಾರಾಮ ಹುಂದರೆ ಮತ ಚಲಾಯಿಸಿದರು.
ನಿಡಸೋಸಿ ಶ್ರೀಗಳು ಮತ ಚಲಾಯಿಸಿದರು.
ಡಾ.ಸೋನಾಲಿ ಹಾಗೂ ಡಾ. ಸಮೀರ್ ಸರನೋಬತ್ ಬೆಳಗಾವಿಯಲ್ಲಿ ಮತ ಚಲಾಯಿಸಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಧರ್ಮಪತ್ನಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಅವರ ಪುತ್ರರಾದ ಬಸವಪ್ರಸಾದ ಜೊಲ್ಲೆ, ಜ್ಯೊತಿಪ್ರಸಾದ ಜೊಲ್ಲೆ ಹಾಗೂ ಕುಟುಂಬ ಸದಸ್ಯರು ಯಕ್ಸಂಬಾ ಪಟ್ಟಣದ ಸರಕಾರಿ ಮರಾಠಿ ಶಾಲೆಯ ಬೂತ್ ನಂ ೨೭ ರಲ್ಲಿ ಮತ ಚಲಾಯಿಸಿದರು.
ಶಾಸಕ ಅಭಯ ಪಾಟೀಲ ಪತ್ನಿ ಜೊತೆ ತೆರಳಿ ಮತ ಚಲಾಯಿಸಿದರು
ಸಂಸದ ಸುರೇಶ ಅಂಗಡಿ ಪತ್ನಿ ಹಾಗೂ ಮಕ್ಕಳ ಜೊತೆ ತೆರಳಿ ಮತ ಚಲಾಯಿಸಿದರು.

ಶಾಸಕ ಅನಿಲ ಬೆನಕೆ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದರು

ಬೆಳಗಾವಿಯಲ್ಲಿ ಕೆಲವೆಡೆ ಇವಿಎಂ ಸಮಸ್ಯೆ: ಆರಂಭವಾಗದ ಮತದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಮತದಾನಕ್ಕೆ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಆದರೆ ಶಿವಬಸವನಗರದ ಒಂದು ಮತ್ತು ಆಜಂ ನಗರದ ಒಂದು ಮತಗಟ್ಟೆಗಳಲ್ಲಿ ಇನ್ನೂ ಮತದಾನ ಆರಂಭವಾಗಿಲ್ಲ.

ಶಿವಬಸವನಗರದ ಜಿ.ಜಿ.ಯಳ್ಳೂರು ಪ್ರಾಥಮಿಕ ಶಾಲೆ ಮತ್ತು ಆಜಂ ನಗರದ ಭೂತ್ ನಂ.28ರಲ್ಲಿ ಮತಯಂತ್ರ ಸಮಸ್ಯೆಯಿಂದಾಗಿ 8.30ರ ವರೆಗೂ ಮತದಾನ ಆರಂಭವಾಗಿಲ್ಲ.

ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದು, ಕೆಲವರು ಸಾಲು ಹಚ್ಚಿ ಕಾಯುತ್ತಿದ್ದರೆ, ಕೆಲವರು ಕಾಯಲಾಗದೆ ಮರಳಿ ಹೋಗುತ್ತಿದ್ದಾರೆ. ಸರಿಯಾಗಲು ಇನ್ನೂ ಅರ್ಧಗಂಟೆ ಬೇಕಾಗಬಹುದೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಬೆಳಗಾವಿ ಪಾಲಿಕೆ ಮಾಜಿ ಸದಸ್ಯೆ ಅನುಶ್ರೀ ದೇಶಪಾಂಡೆ ಹನುಮಾನ ನಗರದಲ್ಲಿ ಪತಿ ಮತ್ತಿತರರೊಂದಿಗೆ ಮತ ಚಲಾಯಿಸಿದರು.

ಟಿಳಕವಾಡಿಯ ಲೇಲೆಗ್ರೌಂಡ್ ಮತಗಟ್ಟೆ ಮತ್ತು ಚನ್ನಮ್ಮ ನಗರದ ವಿದ್ಯಾಭವನ ಮತಗಟ್ಟೆಗಳಲ್ಲಿ ಅನೇಕರಿಗೆ ಬಲಗೈ ತೋರುಬೆರಳಿಗೆ ಶಾಯಿ ಹಾಕಲಾಗುತ್ತಿದೆ. ಮತದಾರರು ಯಾವುದೇ ಬೆರಳು ತೋರಿಸಿದರೂ ಅದಕ್ಕೆ ಶಾಯಿ ಹಾಕಲಾಗುತ್ತಿದೆ.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹುಕ್ಕೇರಿಯಲ್ಲಿ ಬೆಳಗ್ಗೆಯೇ ಮತಚಲಾವಣೆ ಮಾಡಿದ್ದಾರೆ.

ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ವಿಜಯಪುರದಲ್ಲಿ ಮತ ಚಲಾಯಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button