Kannada NewsKarnataka NewsLatest

*ಬೆಳಗಾವಿ; ಡಿಸಿಸಿ ಬ್ಯಾಂಕ್ ನ 5 ಕೋಟಿ ರೂ ಜಪ್ತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗೋಕಾಕ್- ವಿಧಾನ ಸಭಾ ಕ್ಷೇತ್ರದ ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಲಗುಡ್ಡ ಚೆಕ್ ಪೋಸ್ಟ್ ನಲ್ಲಿ ಬರೋಬ್ಬರಿ 5 ಕೋಟಿ ರೂ ದಾಖಲೆ ಇಲ್ಲದ ಹಣ ಜಪ್ತಿ ಮಾಡಲಾಗಿದೆ.

ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (DCC Bank Belagavi) ರವರು ಯಾವುದೇ ಸಕ್ಷಮ ಪ್ರಾಧಿಕಾರ ಅನುಮತಿ ಪಡೆಯದೆ ಮತ್ತು ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ 5 ಕೋಟಿ ಹಣವನ್ನು ವರ್ಗಾವಣೆ ‌ಮಾಡುವಾಗ ಪೊಲೀಸರು ಹಾಗೂ ಎಫ್ ಎಸ್ ಟಿ ತಂಡ ವಾಹನ ತಪಾಸಣೆ ನಡೆಸಿ ಹಣವನ್ನು ಜಪ್ತಿ‌ಮಾಡಿದ್ದಾರೆ.

Home add -Advt

ಮುಂದಿನ‌ ಕ್ರಮಕ್ಕಾಗಿ ಅಧ್ಯಕ್ಷರು ತ್ರಿಸದಸ್ಯ ಸಮಿತಿ ‌ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಯವರಿಗೆ ವರದಿ ಸಲ್ಲಿಸಿ, ಸದರಿ ಹಣವನ್ನು ಉಪಖಜಾನೆ ಗೋಕಾಕ್ ಭದ್ರತಾ ಕೋಣೆಯಲ್ಲಿ ಇರಿಸಲಾಗಿದೆ.

https://pragati.taskdun.com/vidhanasabha-electiinbjp-candidate-listrelease/


Related Articles

Back to top button