Latest

ಐವರು ಜಿಂಕೆ ಬೇಟೆಗಾರರ ಬಂಧನ

ಪ್ರಗತಿವಾಹಿನಿ ಸುದ್ದಿ, ಶಿರಸಿ:
ಜಿಂಕೆಯನ್ನು ಬೇಟೆಯಾಡಿ ಮನೆಯಲ್ಲಿ ಕತ್ತಿರಿಸಿ ತುಂಡು ಮಾಡುತ್ತಿರುವಾಗ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಐವರು ಆರೋಪಿಗಳನ್ನು ಹಾಗೂ ಜಿಂಕೆ ಮಾಂಸವನ್ನು ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಯಲ್ಲಾಪುರದಲ್ಲಿ ನಡೆದಿದೆ. ಯಲ್ಲಾಪುರದ ಮಹಮ್ಮದ್ ಹನೀಫ್ ಶೇಖ್, ಮೌಸಿಮ್ ಅಬ್ದುಲ್ ರಜಾಕ್ ಶೇಖ್ ತಾಲೂಕಿನ ಮಂಚಿಕೇರಿಯ ಇಸ್ಮಾಯಿಲ್ ಶೇಖ್, ಅಬ್ದುಲ್ ಖಾದರ್ ಶೇಖ್, ಬೊಮ್ಮನಹಳ್ಳಿಯ ಮಹಮ್ಮದ್ ಹುಸೇನ್ ಶೇಖ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಜಿಂಕೆ ಮಾಂಸ ಹಾಗೂ ಬೇಟೆಗೆ ಬಳಸಿದ ದ್ವಿಚಕ್ರ ವಾಹನ ಮತ್ತಿತ್ತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಶನಿವಾರ ತಡರಾತ್ರಿ ಬೇಡ್ತಿ ಹಳ್ಳದಲ್ಲಿ ಮೀನು ಹಿಡಿಯಲು ಹೋದಾಗ ಜಿಂಕೆಯನ್ನು ಬೇಟೆಯಾಡಿ ಭಾನುವಾರ ಬೆಳಿಗ್ಗೆ ಮಂಚಿಕೇರಿಯಲ್ಲಿ ಮಾಂಸವನ್ನು ಹಂಚಿಕೆ ಮಾಡಿಕೊಳ್ಳುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಸಿಕೊಳ್ಳಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button