ಪ್ರಗತಿವಾಹಿನಿ ಸುದ್ದಿ; ಶಿರಸಿ; 2 ಲಾರಿಗಳಲ್ಲಿ ಅಕ್ರಮವಾಗಿ ನಾಟಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ 5 ಫಾರೆಸ್ಟರ್ ಗಳನ್ನು ಒಮ್ಮೆಲೇ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಯಲ್ಲಾಪುರ ಡಿಎಫ್ ಒ ಎಸ್.ಜಿ.ಹೆಗಡೆ ತನಿಖಾ ವರದಿ ಬಳಿಕ ಜಿಲ್ಲಾ ಅರಣ್ಯ ಅಧಿಕಾರಿ ವಸಂತ ರೆಡ್ಡಿ ಅವರಿಂದ ಅಮಾನತು ಆದೇಶ ಹೊರಡಿಸಲಾಗಿದೆ.
ಮುಂಡಗೋಡದಿಂದ ಶಿರಸಿಗೆ ನಾಟಾ ಸಾಗಾಟ ಮಾಡುವ ವೇಳೆ ಎಕ್ಕಂಬಿ ಬಳಿ ದಾಳಿ ನಡೆಸಲಾಗಿತ್ತು. 52 ನಾಟಾ ತುಂಡುಗಳನ್ನು ಹೊತ್ತಿದ್ದ 2 ಲಾರಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು
ವಲಯ ಅರಣ್ಯಾಧಿಕಾರಿ ಜಿ.ಟಿ.ರೇವಣಕರ್ ವಿರುದ್ಧ ಕ್ರಮಕ್ಕೆ ರಾಜ್ಯ ಅರಣ್ಯ ಮುಖ್ಯಸ್ಥರಿಗೆ ಶಿಫಾರಸು ಮಾಡಲಾಗಿತ್ತು. ಇದೀಗ ಸುರೇಶ್ ವಡ್ಡರ್, ಮಾರುತಿ ಸೊರಗಾಂವಿ, ಮಹೇಶ್ ಬೋರಕರ್, ಹನುಮಂತ ಬಂಡಿವಡ್ಡರ್, ಗುರುಚಂದ್ರ ಎಮ್.ಬ್ಯಾಳಿಯವರ ಸೇರಿ ಐವರು ಫಾರೆಸ್ಟರ್ ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ