ಮನೆಯೊಂದಿಗೆ ಪತಿಯನ್ನೂ ಕಳೆದುಕೊಂಡಾಕೆಗೆ 5 ಲಕ್ಷ ರೂ.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಲಕ್ಷಾಂತರ ಜನ ಕಂಗಾಲಾಗಿದ್ದಾರೆ. ಮನೆಗಳನ್ನು ಕಳೆದುಕೊಂಡಿದ್ದಾರೆ. ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ದುಡಿದಿಟ್ಟ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಹಲವರದ್ದು ಜೀವನವೇ ಕೊಚ್ಚಿ ಹೋಗಿದೆ.
ಬೆಳಗಾವಿ ತಾಲೂಕಿನ ಚಂದನಹೊಸೂರಿನ ಕಲ್ಪನಾ ಎನ್ನುವ ಮಹಿಳೆ ತನ್ನ ಮನೆಯೊಂದಿಗೆ ಪತಿಯನ್ನೂ ಕಳೆದುಕೊಂಡಿದ್ದಾಳೆ. ಮನೆ ಕುಸಿದಿದ್ದರಿಂದ ಕಲ್ಪನಾಳ ಪತಿ ಯಲ್ಲೇಶ್ ಸಹ ಮೃತರಾಗಿದ್ದಾರೆ. ಈಗ ಇಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ಸಾಕುತ್ತ ಜೀವನ ಸಾಗಿಸಬೇಕಾದ ಅನಿವಾರ್ಯತೆ ಅವಳದ್ದು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇಂದು ಕಲ್ಪನಾಳಿಗೆ ಸರಕಾರದ ಪರವಾಗಿ 5 ಲಕ್ಷ ರೂ. ಚೆಕ್ ವಿತರಿಸಿದರು. ಹೆಚ್ಚಿನ ಸಹಾಯ ಮಾಡಲು ಪ್ರಯತ್ನಿಸುವುದಾಗಿ ಭರವಸೆಯನ್ನೂ ನೀಡಿದ್ದಾರೆ.
ಈ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ, ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಪಾಟೀಲ ಸಹ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ